ಕಾಲೇಜು ಪುನಾರಾರಂಭ ಮೂರು ಸುತ್ತಿನ ಸಭೆ ನಡೆಸಲಾಗಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ನವೆಂಬರ್,16,2020(www.justkannada.in) : ಕಾಲೇಜು ಪುನಾರಾರಂಭ ಸಂಬಂಧ ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಪ್ರಾಂಶುಪಾಲರಿಗೆ ಮಾರ್ಗಸೂಚಿ ಬಗ್ಗೆ ವಿವರಣೆ ನೀಡಿದ್ದೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದ್ದಾರೆ.kannada-journalist-media-fourth-estate-under-loss

ಕಾಲೇಜು ಆರಂಭ ಕುರಿತಂತೆ ಮೈಸೂರು ವಿವಿಯಿಂದ ಎಸ್‌ಓಪಿ ಪ್ರಕಟ ಮಾಡಿದ್ದು, ಮೈಸೂರು ವಿವಿಯಲ್ಲಿ 1.30 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಅಂತಿಮ ತರಗತಿ ವಿದ್ಯಾರ್ಥಿಗಳು 35 ಸಾವಿರಕ್ಕು ಹೆಚ್ಚು ಇದ್ದಾರೆ ಎಂದರು.

ಪೋಷಕರಿಂದ ಅನುಮತಿ ಪತ್ರ ತರಬೇಕು

ಎಲ್ಲರಿಗು ಕೊರೊನಾ ಟೆಸ್ಟ್ ಕಡ್ಡಾಯ. ಪೋಷಕರಿಂದ ಅನುಮತಿ ಪತ್ರ ತರಬೇಕು. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡು ವಿಭಾಗ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು. ಕಾಲೇಜಿನಲ್ಲಿ ತರಗತಿಗಳು ಮಾತ್ರ ಇರಲಿವೆ. ಕ್ಯಾಂಟಿನ್ ಅಥವಾ ಲೈಬ್ರರಿ ಇರೋದಿಲ್ಲ. ಕಾಲೇಜುಗಳ ಪುನಾರರಂಭಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಕುಲಪತಿ ಪ್ರೋ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

college-reunion-held-three-round-meeting-Chancellor-Prof.G.Hemant Kumar

key words ; college-reunion-held-three-round-meeting-Chancellor-Prof.G.Hemant Kumar