JK EXCLUSIVE : ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆ ರದ್ದು ‘ ಕೈವಾಡದ’ ಬಗ್ಗೆ ಎಂ.ಬಿ.ಮರಂಕಲ್ FIRST REACTION.

 

ಮೈಸೂರು, ನ.17, 2020 : (www.justkannada.in news) : ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಅವರ ರಾಜಕೀಯ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಎಂ.ಬಿ.ಮರಮಕಲ್‌ ಅವರ ನೇಮಕ ದಿಢೀರ್ ರದ್ದುಪಡಿಸಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಮೂಲತಃ ಗುಲ್ಬರ್ಗದವರಾದ ಮಲ್ಲಿನಾಥ ಮರಂಕಲ್, ಮೈಸೂರಿನ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ಪತ್ರಕರ್ತರಾಗಿದ್ದವರು. ಈ ಸಲುವಾಗಿಯೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಹಿರಿಯ ರಾಜಕಾರಣಿಗಳ ಸಂಪರ್ಕವನ್ನು ಸಹ ಹೊಂದಿದ್ದರು. ಕೆಲ ವರ್ಷಗಳ ಹಿಂದೆ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದ ಬಳಿಕ ಬಿ.ಎಸ್. ಯಡಿಯೂರಪ್ಪ ಅವರ ಜತೆಗೆ ಗುರುತಿಸಿಕೊಂಡಿದ್ದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಸರಕಾರದ ಪತನದ ಬೆಳವಣಿಗೆಯಲ್ಲಿ ಮರಮಕಲ್ ಪಾತ್ರ ಪ್ರಮುಖದ್ದಾಗಿತ್ತು. ಈ ಕಾರಣಕ್ಕಾಗಿಯೇ ಜೆಡಿಎಸ್ ಶಾಸಕರು, ಮರಂಕಲ್ ವಿರುದ್ಧ ದೂರಿದ್ದರು.

ಮೈತ್ರಿ ಸರಕಾರ ಪತನದ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ, 2019ರ ಅಕ್ಟೋಬರ್‌ನಲ್ಲಿ ಮರಮಕಲ್ ಅವರನ್ನು ರಾಜಕೀಯ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಆದರೆ ದಿಢೀರ್ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಇದೇ 13ರಿಂದ ಅನ್ವಯವಾಗುವಂತೆ ನೇಮಕಾತಿ ಆದೇಶ ರದ್ದು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

kannada-journalist-media-fourth-estate-under-loss

ಯಾರ ಕೈವಾಡ..?

ಮರಮಕಲ್ ನೇಮಕ ರದ್ದು ಪಡಿಸಿರುವ ಬೆಳವಣಿಗೆಗಳ ಹಿಂದೆ ಸಿಎಂ ಯಡಿಯೂರಪ್ಪ ಅವರ ಕುಟುಂಬಸ್ಥರ ಅದರಲ್ಲೂ ಪತ್ರ ವಿಜಯೇಂದ್ರ ಕೈವಾಡವಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಸ್ಟ್ ಕನ್ನಡ ಡಾಟ್ ಇನ್, ಎಂ.ಬಿ.ಮರಂಕಲ್ ಅವರನ್ನೇ ಈ ಬಗ್ಗೆ ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ…

Chief Minister BS Yediyurappa's- political adviser - MB Maramkal- first-reaction- on-being -dropped

ಬಿ.ಎಸ್. ಯಡಿಯೂರಪ್ಪ ಅವರ ಜತೆ ಸೇರುವಂತೆ ಖುದ್ದು ಬಿಎಸ್ವೈ ಸೇರಿದಂತೆ ಅನೇಕರು ಬಹುದಿನಗಳಿಂದಲೂ ಒತ್ತಾಯಿಸುತ್ತಲೇ ಇದ್ದರು. ನಾನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಒತ್ತಡ ಮತ್ತಷ್ಟು ಹೆಚ್ಚಾಯಿತು. ನನಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮತ್ತೆ ನೋಡುವಾಸೆ. ಆದ್ದರಿಂದ ಅವರ ಜತೆ ಹೋದೆ. ಆದರೆ ಅವರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಾನು ಅವರ ಜತೆಗೂಡಿದೆ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮತ್ತೆ ನೋಡಬೇಕು ಎಂಬ ಏಕೈಕ ಉದ್ದೇಶ ನನ್ನದಾಗಿತ್ತು.

kannada-journalist-media-fourth-estate-under-loss

ಮೈತ್ರಿ ಸರಕಾರ ಪತನದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇದಾದ ಕೆಲ ತಿಂಗಳುಗಳ ಬಳಿಕ ನನ್ನನ್ನು ಸಚಿವ ಸ್ಥಾನಮಾನ ನೀಡಿ ಅವರ ರಾಜಕೀಯ ಸಲಹೆಗಾರನನ್ನಾಗಿ ನೇಮಿಸಲಾಯಿತು, ಇದನ್ನು ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದು ನಾನು ಒಪ್ಪಿಕೊಂಡೆ. ಆದದ್ದರಿಂದ ಇದು ನನಗೆ ಅನಿರೀಕ್ಷಿತವಾದದ್ದು. ಹಾಗೆಯೇ, ಮೂರು ದಿನಗಳ ಹಿಂದೆ ಆ ಹುದ್ದೆಯನ್ನು ರದ್ದು ಪಡಿಸಿ ಆದೇಶಿಸಲಾಗಿದೆ. ಇದು ಸಹ ನನಗೆ ಅನಿರೀಕ್ಷಿತವಾದದ್ದು ಎಂದು ಮರಂಕಲ್ ಉತ್ತರಿಸಿದರು.

00000

KEY WORDS : Chief Minister BS Yediyurappa’s- political adviser – MB Maramkal- first-reaction- on-being -dropped