ಬೆಂಗಳೂರು,ನವೆಂಬರ್,20,2020(www.justkannada.in): ಬೆಂಗಳೂರಿನಲ್ಲಿ ನಿನ್ನೆ ಆರಂಭಗೊಂಡ 3 ದಿನಗಳ ‘ತಂತ್ರಜ್ಞಾನ ಶೃಂಗಸಭೆ-2020’ ವರ್ಚುವಲ್ ರೂಪದಲ್ಲಿ ವೈವಿಧ್ಯಮಯ ಮಳಿಗೆಗಳಿವೆ.
ಇಂಥದೊಂದು ಮಳಿಗೆ ‘ಕೃಷಿಕ್ ಆಗ್ರಿಬಿಸಿನೆಸ್ ಇನ್ ಕ್ಯುಬೇಟರ್’ ನಲ್ಲಿ ಕೃಷಿ ವಲಯದ ಉದಯೋನ್ಮುಖ ಉದ್ದಿಮೆದಾರರಿಗೆ ಸಲಹೆ, ಮಾರ್ಗದರ್ಶನಗಳಿವೆ. ಕೃಷಿ ವಲಯದಲ್ಲಿ ನಾವೀನ್ಯತೆಯಿಂದ ಕೂಡಿದ ಪರಿಕಲ್ಪನೆ ಹೊಂದಿರುವ ಹಾಗೂ ಕೃಷಿ ನವೋದ್ಯಮ ಆರಂಭಿಸಲು ಉತ್ಸುಕರಾಗಿರುವ ಯುವಜನರು, ವಿದ್ಯಾರ್ಥಿಗಳು, ರೈತರು, ಮಹಿಳೆಯರು ಮುಂತಾದವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಹೂಡಿಕೆ ಅವಕಾಶಗಳು, ಅಗತ್ಯ ಮೂಲಸೌಕರ್ಯ, ಬೌದ್ಧಿಕ ಆಸ್ತಿ, ಗುಂಪು ತರಬೇತಿ, ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು, ಪ್ರಯೋಗಾಲಯ ಸೌಲಭ್ಯ ಮುಂತಾದವುಗಳ ವಿವರಗಳು ಇಲ್ಲಿವೆ.
ಪ್ರಾಥಮಿಕ ಹಂತದಲ್ಲಿರುವ ಪರಿಕಲ್ಪನೆ (ಐಡಿಯಾ)ಗಳಿಗೆ ಹೂಡಿಕೆ ಮಾಡುವ ಬಗ್ಗೆಯೂ ಮಾಹಿತಿ ಇಲ್ಲಿದೆ. ಒಟ್ಟಾರೆ ಕೃಷಿ ವಲಯದ ನವೋದ್ಯಮ ಐಡಿಯಾ ಇರುವವರಿಗೆ ಈ ಮಳಿಗೆಯಲ್ಲಿ ಸಾಕಷ್ಟು ಮಾಹಿತಿ ಇದೆ. ವರ್ಚುವಲ್ ರೂಪದಲ್ಲಿ ಅಥವಾ ವಾಟ್ಸ್ ಅಪ್ ಮೂಲಕ ಸಂವಾದ ನಡೆಸಬಹುದಾಗಿದ್ದು, ಬಿಸಿನೆಸ್ ಕಾರ್ಡ್ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ಸಂಸ್ಥೆಯ ಬ್ರೋಷರ್, ಕೈಪಿಡಿಯ ಸಾಫ್ಟ್ ಕಾಪಿ ಕೂಡಾ ಲಭ್ಯವಿದೆ.
Key words: Bangalore Tech Summit -2020- Agricultural- Agribusiness – Cubator