ಬೆಂಗಳೂರು,ನವೆಂಬರ್,21,2020(www.justkannada.in): ಡಿಸೆಂಬರ್ 5 ರಂದು ಬಲವಂತವಾಗಿ ಬಂದ್ ಗೆ ಮುಂದಾದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ ಎಂದು ಕನ್ನಡಪರ ಸಂಘಟನೆಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದರು.
ಮರಾಠ ಅಭಿವೃದ್ದಿ ನಿಗಮ ರಚನೆ ಖಂಡಿಸಿ ಕನ್ನಡ ಪರಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಯಾರೂ ಕೂಡ ಬಲವಂತದ ಬಂದ್ ಗೆ ಕರೆ ನೀಡುವಂತಿಲ್ಲ. ಈಗಾಗಲೇ ಕೆಲವರು ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೆ ಅಭ್ಯಂತರವಿಲ್ಲ. ಆದರೆ ಅನಗತ್ಯ ಹೋರಾಟ ಸರಿಯಲ್ಲ ಎಂದರು.
ಯಾರೂ ಕೂಡ ಬಲವಂತ ಬಂದ್ ಮಾಡಬಾರದು. ಬಲವಂತದ ಬಂದ್ ಗೆ ಮುಂದಾದ್ರೆ ಕಠಿಣ ಕ್ರಮ ಅನಿವಾರ್ಯ. ಸಾರ್ವಜನಿಕರಿಗೆ ತೊಂದರೆ ಕೊಟ್ಟರೇ ಕ್ರಮ ಅನಿವಾರ್ಯ. ಬಲವಂತದ ಬಂದ್ ಮಾಡಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡಪರ ಸಂಘಟನೆಗಳಿಗೆ ಸಿಎಂ ಬಿಎಸ್ ವೈ ಮತ್ತೆ ಎಚ್ಚರಿಕೆ ನೀಡಿದರು.
ಹಾಗೆಯೇ ರಾಜ್ಯ ಸರ್ಕಾರ ಯಾವುದೇ ಜಾತಿ, ಭಾಷೇ ಕುರಿತು ತಾರತಮ್ಯ ಮಾಡಿಲ್ಲ. ಕನ್ನಡದ ಅಭಿವೃದ್ಧಿಗೆ, ಕನ್ನಡಿಗರ ಅಭಿವೃದ್ಧಿಗೂ ಸಾಕಷ್ಟು ಯೋಜನೆ ರೂಪಿಸಲಾಗಿದೆ. ಕನ್ನಡಪರ ಸಂಘಟನೆಗಳಿಗೆ ಈಗಲೂ ಮನವಿ ಮಾಡುತ್ತಿದ್ದೇನೆ ಕರ್ನಾಟಕ ಬಂದ್ ಕೈಬಿಟ್ಟು ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದರು.
Key words: Forced –action-karnataka bandh-CM BS Yeddyurappa- warns -Kannada organizations