ಬೆಂಗಳೂರು, ನವೆಂಬರ್ 24, 2020 (www.justkannada.in): ಮದಗಜ ಚಿತ್ರ ತಂಡ ಬೆಂಗಳೂರಿನಲ್ಲಿ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಬಹುನಿರೀಕ್ಷೆಯ ಚಿತ್ರದ ಚಿತ್ರೀಕರಣ ಈಗಗಲೇ ಶೇ.60ರಷ್ಟು ಪೂರ್ಣಗೊಂಡಿದೆ. “ಅಯೋಗ್ಯ” ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಮಹೇಶ್ ಎರಡನೇ ಚಿತ್ರ ಇದಾಗಿದ್ದು, ಟಿಂಗ್ ವಾರಣಾಸಿಯಲ್ಲಿ ಪ್ರಾರಂಭವಾಗಿತ್ತು.
ಶ್ರೀಮುರಳಿ ಎದುರಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದು ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಜಗಪತಿ ಬಾಬು ಪ್ರಮುಖ ವಿಲನ್ ಆಗಿದ್ದು ನಟ ದೇವಯಾನಿ ಈ ಚಿತ್ರದೊಂದಿಗೆ 20 ವರ್ಷಗಳ ಗ್ಯಾಪ್ ನಂತರ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ನವೀನ್ ಕುಮಾರ್ ಅವರ ಛಾಯಾಗ್ರಹಣ, ರವಿ ಬಸೂರ್ ಸಂಗೀತ ಚಿತ್ರಕ್ಕಿದೆ. ಚಿತ್ರ ನಾಲ್ಕು ಹಾಡನ್ನು ಒಳಗೊಂಡಿದ್ದು ಎರಡು ಹಾಡುಗಳಿಗೆ ಸಾಹಿತ್ಯವನ್ನು ಚೇತನ್ ಕುಮಾರ್ ಬರೆದಿದ್ದರೆ, ಉಳಿದ ಎರಡು ಹಾಡುಗಳನ್ನು ರವಿ ಬಸ್ರೂರ್ ಮತ್ತು ಕಿನ್ನಾಳ್ ರಾಜ್ ಬರೆದಿದ್ದಾರೆ.