ಮೈಸೂರು, ನವೆಂಬರ್,25,2020(www.justkannada.in): ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಶ್ರೀ ಕ್ಷೇತ್ರದಲ್ಲಿ ಶ್ರೀ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸಂಕೀರ್ಣದ ಪುನರ್ ನಿರ್ಮಾಣದ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವೇರಿಸಿದರು.
ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ದೇವಾಲಯದ ಶಂಕು ಸ್ಥಾಪನೆ ಪೂಜೆ ನೆರವೇರಿಸಿದರು, ಈ ವೇಳೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್, ಜಿ.ಪಂ ಸಿಇಓ ಭಾರತಿ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವಾಲಯದ ಪುನರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಶಂಕುಸ್ಥಾಪನೆ ನೇರವೇರಿಸಿರುವುದು ನನಗೆ ಸಂತಸ ತಂದಿದೆ. ದೇವರಿಗೆ ಪೊಜೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ . ಇದು ನನ್ನ ಪೂರ್ವ ಜನ್ಮದ ಫಲವೆಂದು ಭಾವಿಸಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಅನುದಾನವನ್ನ ಬಿಡುಗಡೆ ಮಾಡಿಸುತ್ತೇನೆ. ಎರಡು ವರ್ಷದ ಒಳಗೆ ಈ ಕಾಮಗಾರಿಯನ್ನ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ನನ್ನ ಅವಧಿ ಇನ್ನೂ ಎರಡು ವರ್ಷವಿದೆ. ಆ ಅವಧಿಯಲ್ಲೇ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.
ಯಡಿಯೂರಪ್ಪನವರು ಒಂಟಿ ಸಲಗದ ಹಾಗೇ ಕೆಲಸ ಮಾಡುತ್ತಿದ್ದಾರೆ –ಡಿಸಿಎಂ ಗೋವಿಂದ ಕಾರಜೋಳ…
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇವಸ್ಥಾನ ಪುನರ್ ನಿರ್ಮಾಣ ಕಾರ್ಯಕ್ಕೆ ಮೊದಲನೇ ಹಂತದಲ್ಲಿ 16 ಕೋಟಿ ಬಿಡುಗಡೆ ಮಾಡಲಾಗಿದೆ. ಪಂಚಲಿಂಗದರ್ಶನ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ ಯಡಿಯೂರಪ್ಪನವರು ರಾಜ್ಯದ ಉದ್ದಗಲಕ್ಕೂ ಏಕಾಂಗಿಯಾಗಿ ಸಂಚರಿಸಿ ಜನತೆ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಒಂಟಿ ಸಲಗದ ಹಾಗೇ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದರು.
ರಾಜ್ಯದಲ್ಲಿ ಈ ಬಾರಿ ಬರ ಹಾಗೂ ನೆರೆ ಹಾನಿ ಇಂದ 25 ಸಾವಿರ ಕೋಟಿ ಹಾನಿಯಾಗಿದೆ. ಮನೆ ಕಳೆದುಕೊಂಡ ಬಡವರು ಹಾಗೂ ರೈತರಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು 5 ಲಕ್ಷಗಳನ್ನು ಸಿಎಂ ನೀಡುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
english summary….
CM BSY lays foundation stone for renovation of temples in Mudukutore
Mysuru, Nov. 25, 2020 (www.justkannada.in): Chief Minister B.S. Yedyurappa laid the foundation stone for the renovation of the Sri Bhramaramba and Mallikarjunaswamy temples in Mudukutore, in the divine presence of His Holiness Sri Shivarathri Deshikendra Mahaswamiji today.
Speaking to the press persons after laying the foundation stone the CM said he had instructed the contractors to complete the works within two years, during his tenure itself.
Deputy Chief Minister Govind Karajola, Minister for Cooperation and Mysuru District In-charge Minister S.T. Somashekar, Muzrai Minister Kota Srinivas Poojari, MLA S.A. Ramadas, Deputy Commissioner Rohini Sindhoori, ZP President Parimala Shyam, ZP CEO Bharati and other dignitaries and officers were present.
Keywords: CM BSY-Mudukutore-temple renovation-foundation stone
Key words: cm bs yeddyurappa-mysore-mudukutore- Rebuilding –temple-worship