ನಾಗಮಂಗಲ, ನವೆಂಬರ್,27,2020(www.justkannada.in): ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಬಿಎಸ್ ವೈ ಮಕ್ಕಳು ರಾಜಕಾರಣ ಮಾಡ್ತಿಲ್ವಾ..? ಸಿದ್ದರಾಮಯ್ಯ ಮಕ್ಕಳು ರಾಜಕಾರಣ ಮಾಡ್ತಿಲ್ವಾ..? ಎಂದು ಪ್ರಶ್ನಿಸಿದ್ದಾರೆ.
ನಾಗಮಂಗಲದಲ್ಲಿ ಇಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಾನು ಎಂಎಲ್ ಎ ಆಗಬೇಕೆಂದಿದ್ದರೇ 10 ವರ್ಷದ ಹಿಂದೆಯೇ ಆಗ್ತಿದ್ದೆ. ನಮ್ಮ ತಂದೆ ಹೆಸರಲ್ಲಿ ಎಷ್ಟೋ ಜನ ಶಾಸಕರಾದರು. ನಾನು ಸಿನಿರಂಗದಲ್ಲಿ ತೊಡಗಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಹಾಗೆಯೇ ಜೆಡಿಎಸ್ ನನಗೆ ಒಂದು ಜವಾಬ್ದಾರಿ ಕೊಟ್ಟಿದೆ. ಅದನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
Key words: BS yeddyurappa -Siddaramaiah’s –Children- Politics -Question -Nikhil Kumaraswamy