ಬೆಂಗಳೂರು,ನವೆಂಬರ್,30,2020(www.justkannada.in): ರಾಜ್ಯ ಸಚಿವ ಸಂಪುಟ ಸೇರಲು ಕಾತರರಾಗಿದ್ದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಹೈಕೋರ್ಟ್ ವಿಭಾಗೀಯ ಪೀಠ ಬಿಗ್ ಶಾಕ್ ನೀಡಿದ್ದು, ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಆದೇಶ ನೀಡಿದೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಹೈಕೋರ್ಟ್ ಆದೇಶದಿಂದ ನನಗೆ ನೋವಾಗಿದೆ. ಈ ಬಗ್ಗೆ ಹೆಚ್.ವಿಶ್ವನಾಥ್ ಅವರ ಜತೆ ಇನ್ನು ಮಾತನಾಡಿಲ್ಲ. ವಿಶ್ವನಾಥ್ ಅವರ ಜತೆ ಈ ಬಗ್ಗೆ ಚರ್ಚಿಸುತ್ತೇನೆ ಎಂದರು.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಕೇಂದ್ರಕ್ಕೆ ಆಕಾಂಕ್ಷಿಗಳ ಪಟ್ಟಿ ಕಳುಹಿಸಿದ್ದೇವೆ. ಶೀಘ್ರವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಆದೇಶ ಬಿಗ್ ಶಾಕ್ ನೀಡಿದೆ. ಸಚಿವರಾಗುವ ಹಂಬಲದಲ್ಲಿದ್ದ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ಇಂದು ನ್ಯಾಯಾಲಯ ಆದೇಶಿಸಿದೆ. ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ಎ.ಎಚ್.ವಿಶ್ವನಾಥ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈ ಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಇನ್ನುಳಿದಂತೆ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ರನ್ನು ಅರ್ಹರು ಎಂದು ಪರಿಗಣಿಸಲಾಗಿದೆ. ಇವರಿಬ್ಬರು ಸಂವಿಧಾನದಡಿಯಲ್ಲಿ ಮರು ಆಯ್ಕೆಯಾಗಿರುವುದರಿಂದಾಗಿ ಅನರ್ಹರಾಗಿಲ್ಲ ಎಂದು ತಿಳಿಸಲಾಗಿದೆ.
Keyt words: MLC-H.Vishwanath – unfit – minister-highcourt- Revenue Minister -R. Ashok