ಬೆಂಗಳೂರು, ಡಿಸೆಂಬರ್ 02, 2020 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 12,000 ರನ್ ಗಳಿಸಿದ್ದಾರೆ.
ಕ್ಯಾನ್ ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಪಂದ್ಯಕ್ಕೂ ಮೊದಲು 11,977 ರನ್ ಗಳಿಸಿದ್ದರು.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಲು ಮುಂದಾದ ಬಳಿಕ ಕ್ರೀಸ್‌ಗೆ ಬಂದ ಕೂಡಲೇ ಈ ಮೈಲುಗಲ್ಲು ಸಾಧಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 242ನೇ ಇನ್ನಿಂಗ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಇದರಿಂದಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಸಚಿನ್ ತಮ್ಮ 300ನೇ ಇನ್ನಿಂಗ್‌ನಲ್ಲಿ 12,000ನೇ ರನ್ ದಾಖಲಿಸಿದ್ದರು.
english summary…..
Team India captain Virat Kohli today created another record by creating the fastest 12,000 runs in one-day cricket.
He created the record during the 3rd one-day match being held at Canberra in Australia. He crossed the 11,977 runs and created the record. He has achieved this feat in 242 innings, breaking master blaster Sachin Tendulkar’s record. Sachin had scored 12,000 runs from 300 innings.