ನವದೆಹಲಿ,ಡಿ,3,2020(www.justkannada.in): ಭಾರತದ ಹಲವು ಪ್ರಮುಖ ಬ್ರಾಂಡ್ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಕಲಬೆರಕೆಯಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಮಾಹಿತಿ ನೀಡಿದೆ.
ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ಪ್ರತಿಷ್ಠಿತ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕ ಇರುವುದು ಪತ್ತೆಯಾಗಿದೆ. ಜರ್ಮನ್ ಮತ್ತು ಭಾರತದ ಪ್ರಯೋಗಾಲಯದಲ್ಲಿ ನಡೆದ ಜೇನುತುಪ್ಪ ಪರಿಶೀಲನೆಯ ವರದಿಯ ತನಿಖೆ ನಡೆಸಿದಾಗ ಭಾರತದ ಬಹುತೇಕ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಅಂಶ ಇರುವುದು ಗೊತ್ತಾಗಿದೆ. ಶೇ. 77ರಷ್ಟು ಮಾದರಿಯಲ್ಲಿ ಸಕ್ಕರೆ ಪಾಕ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖ ಜೇನುತುಪ್ಪ ಬ್ರಾಂಡ್ ಕಂಪನಿಗಳಾದ ಡಾಬರ್, ಪತಂಜಲಿ, ಬೈದ್ಯನಾಥ್, ಜ್ಹಾಂಡು, ಹಿಟ್ಕರಿ ಮತ್ತು ಆಪಿಸ್ ಹಿಮಾಲಯದ ಜೇನುತುಪ್ಪದಲ್ಲಿ ಕಲಬೆರಿಕೆ ಇದೆ ಎಂದು ವರದಿ ತಿಳಿಸಿದೆ. ಪರಿಶುದ್ಧವೆಂದು ಹೇಳಲಾಗುವ ಬ್ರಾಂಡ್ ಗಳ ಜೇನುತುಪ್ಪದಲ್ಲಿ ಸಕ್ಕರೆ ಅಂಶ ಇರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಶೇಕಡ 77 ರಷ್ಟು ಸ್ಯಾಂಪಲ್ ಗಳಲ್ಲಿ ಕಲಬೆರಕೆ ಇರುವುದು ಪತ್ತೆಯಾಗಿದ್ದು, ಸಕ್ಕರೆ ಪಾಕವನ್ನು ಜೇನುತುಪ್ಪದಲ್ಲಿ ಮಿಶ್ರಣ ಮಾಡಲಾಗಿದೆ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ತಿಳಿಸಿದೆ. ಹೀಗಾಗಿ ಪರಿಶುದ್ಧ ಜೇನುತುಪ್ಪ ಎಂದು ಸೇವಿಸುವವರು ಇನ್ಮುಂದೆ ಎಚ್ಚರದಿಂದಿರಬೇಕಾಗಿದೆ.
Key words: Beware – honey-tasters- Company- Adulteration