ಡಾ.ಅಮ್ಮಸಂದ್ರ ಸುರೇಶ್ ಅವರ ಎರಡು ಕೃತಿಗಳ ಲೋಕಾರ್ಪಣೆ: ಮೈಸೂರು ವಿವಿ ಪದವಿಗೆ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಪಠ್ಯವಿಷಯ …

ಮೈಸೂರು,ಡಿಸೆಂಬರ್,7,2020(www.justkannada.in): ಮೈಸೂರಿನ ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಹರ್ಮನ್ ಮೊಗ್ಲಿಂಗ್ ಸಭಾಂಗಣದಲ್ಲಿ ಭೂಮಿಗಿರಿ ಪ್ರಕಾಶನ ಮತ್ತು ಸಿರಿ ಸಮೃದ್ಧಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಲೇಖಕ ಡಾ.ಅಮ್ಮಸಂದ್ರ ಸುರೇಶ್ ಅವರ ‘ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಮತ್ತು ಕೊರೊನಾ ತಂದ ಅನಿವಾರ್ಯತೆಗಳು’ ಪುಸ್ತಕಗಳನ್ನು ಪತ್ರಕರ್ತರ ಅಂಶಿ ಪ್ರಸನ್ನ ಕುಮಾರ್ ಬಿಡುಗಡೆಗೊಳಿಸಿದರು.dr-ammasandra-suresh-author-two-book-release-mysore-university-amshi-prasanna-kumar

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಕೆ. ಪುಟ್ಟಸ್ವಾಮಿ ಆಗಮಿಸಿದ್ದರು. ಪ್ರೊ. ಕೆ.ಪಿ. ಬಸವೇಗೌಡ, ಪ್ರೊ.ಎನ್.ಉಷಾರಾಣಿ, ಡಾ. ವಸಂತಕುಮಾರ್ ತಿಮಕಾಪುರ, ಬೆಟ್ಟೇಗೌಡ  ಉಪಸ್ಥಿತರಿದ್ದರು.

ಕೃತಿಗಳ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಕೆ. ಪುಟ್ಟಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯವು ಬಿ.ಎ ಪತ್ರಿಕೋದ್ಯಮ ಪದವಿಗೆ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪತ್ರಿಕೋದ್ಯಮವನ್ನು ಪಠ್ಯವಿಷಯವಾಗಿ ಬರುವ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಿದೆ ಎಂದು ಹೇಳಿದರು.

ಪತ್ರಿಕೋದ್ಯಮ ಪಠ್ಯದಲ್ಲಿ ಈ ವಿಷಯ ಇರಲಿಲ್ಲ. ಹೀಗಾಗಿ ಇತ್ತೀಚೆಗೆ ನಡೆದ ಅಧ್ಯಯನ ಮಂಡಳಿ (ಬಿಒಎಸ್) ಸಭೆಯಲ್ಲಿ ಪಠ್ಯವಿಷಯ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.dr-ammasandra-suresh-author-two-book-release-mysore-university-amshi-prasanna-kumar

ಧ್ವನಿಯಾಗಲಿ…

ಅಧ್ಯಕ್ಷತೆ ವಹಿಸಿದ್ದ ಐಸಿಎಸ್‍ಎಸ್‍ಆರ್ ಹಿರಿಯ ಪ್ರಾಧ್ಯಾಪಕಿ ಡಾ.ಎನ್. ಉಷಾರಾಣಿ ಮಾತನಾಡಿ, ಮದುವೆ, ಶುಭಸಮಾರಂಭ ಮತ್ತು ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನವರನ್ನು ತಲುಪಲಿದೆ. ಆದರೆ, ಹೃದಯವಿದ್ರಾವಕ ಹಥ್ರಾಸ್ ಘಟನೆಗೆ ಜನರು ಪ್ರತಿರೋಧ ಒಡ್ಡಲಿಲ್ಲ. ಆ ಬಗ್ಗೆ ತುಟಿ ಬಿಚ್ಚಲಿಲ್ಲ. ವಿಚಾರ ಕುರಿತು ಜನ ಮಾತನಾಡುತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳನ್ನು ಗೌರವಿಸದ ಸಮಾಜ ನಾಗರಿಕ ಸಮಾಜವಲ್ಲ. ಪತ್ರಿಕೆಗಳು ದಲಿತರಿಗೆ ಅವಕಾಶ ಮತ್ತು ಧ್ವನಿಯಾಗಬೇಕು ಎಂದು ಕರೆ ನೀಡಿದರು.

ದೆಹಲಿಯ ನಿರ್ಭಯ ಪ್ರಕರಣದಲ್ಲಿ ನ್ಯಾಯ ಸಿಗಲು ಮಾಧ್ಯಮಗಳೇ ಕಾರಣ ಎಂದ ಅವರು, ಜಾತಿಯ ಹೆಸರಿನಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಕೊರೋನಾ ಸಂದರ್ಭದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹೋಗಲಾಗದಂಥ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಸಂದಿಗ್ಧತೆ ಯಾವತ್ತೂ ಬರಬಾರದು ಎಂದರು.

 ನೈತಿಕ ಮಾನದಂಡಗಳು ಬೇಕು- ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್

ಡಾ.ಬಿ.ಆರ್.ಅಂಬೇಡ್ಕರ್, ಅವರ ಸಾಮಾಜಿಕ ಜೀವನ ಮತ್ತು ರಾಜಕಾರಣ ಜೀವನವೂ ಪತ್ರಿಕೋದ್ಯಮದಿಂದ ಪ್ರಾರಂಭವಾಗಿದ್ದು, 36 ವರ್ಷಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಹೋರಾಡಲು ಕಾರಣವೇ ಪತ್ರಿಕೋದ್ಯಮ ಎಂದು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಪತ್ರಕರ್ತರಿಗೆ ನೈತಿಕ ಮಾನದಂಡಗಳ ಇರಬೇಕು ಮತ್ತು ಎಂದಿಗೂ ಭಾವೊದ್ವೇಗಕ್ಕೆ ಮತ್ತು ಪ್ರಚೋದನೆ ಒಳಗಾಗಬಾರದು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಆದರೆ, 65 ವರ್ಷಗಳಾದರೂ ಇನ್ನೂ ಅದು ನೆರವೇರಿಲ್ಲ. ಅಂದಿನ ದಿನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ವಿಚಾರಧಾರೆಗಳನ್ನು ಸಾಮಾನ್ಯ ಜನತೆ ತಿಳಿಸುವ ನಿಟ್ಟಿನಲ್ಲಿ ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದರು ಎಂದು ಅವರು ತಿಳಿಸಿದರು.

ನಂತರ ಡಾ.ವಸಂತಕುಮಾರ್ ತಿಮಕಾಪುರ ಮಾತನಾಡಿ, ಕೃಷಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು.  ಕೊರೋನಾ ಸಂದರ್ಭದಲ್ಲಿ ಏನೆಲ್ಲಾ ಚಟುವಟಿಕೆಗಳು ಬಂದ್ ಆದರೂ ಕೃಷಿ ಚಟುವಟಿಕೆಗಳು ಮಾತ್ರ ಬಂದ್ ಆಗಲಿಲ್ಲ ಎಂದರು.

ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಮತಾ, ಮಹಾರಾಣಿ ಕಾಲೇಜಿನ ನಿವೃತ್ತ  ಪ್ರಾಧ್ಯಾಪಕ ಕೆ.ಪಿ. ಬಸವೇಗೌಡ ಮಾತನಾಡಿದರು. ಭೂಮಿಗಿರಿ ಪ್ರಕಾಶನದ ಎನ್.ಬೆಟ್ಟೇಗೌಡ ಸ್ವಾಗತಿಸಿದರು. ಪತ್ರಕರ್ತ ಮೈಸೂರು ರಂಗನಾಥ್ ನಿರೂಪಿಸಿದರು. ಲೇಖಕ ಡಾ.ಅಮ್ಮಸಂದ್ರ ಸುರೇಶ್ ವಂದಿಸಿದರು.

ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್. ರಾಮಪ್ರಸಾದ್, ಮೈಸೂರು ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ರಾಜು ಕಾಳೇಶ್ವರ್, ಪೂರ್ವ ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ಪುಟ್ಟಸ್ವಾಮಿ, ನಿವೃತ್ತ ಹಿರಿಯ ಅಂಚೆ ಅಧೀಕ್ಷಕ ಶಿವಯ್ಯ,  ನಿವೃತ್ತ ಅಂಚೆ ಅಧೀಕ್ಷಕ ಮಂಡ್ಯದ ಎಚ್.ಸಿ. ಮಹದೇವಯ್ಯ, ಮಂಡ್ಯವಿಭಾಗದ ಅಂಚೆ ಅಧೀಕ್ಷಕ ಕೆ. ಮಂಜುನಾಥರಾವ್, ಎಚ್.ಡಿ. ಕೋಟೆಯ ಕ್ಷೀರಸಾಗರ್, ಚಾ. ನಂಜುಂಡಮೂರ್ತಿ, ಚಿತ್ರಕಲಾವಿದ ಟಿ.ಎಫ್. ಹಾದಿಮನಿ. ¸ತೀಶ್‍ಗೌಡ, ಚಾಮರಾಜನಗರದ ದುಂಡುಮಾದಯ್ಯ. ವನಜಾಕ್ಷ, ಎಂ.ಎಸ್.  ನಾಗರಾಜ್. ತುಳಜಪ್ಪ ನಡಗಡ್ಡಿ  ವಿಶೇಷ ಆಹ್ವಾನಿತರಾಗಿದ್ದರು. ಮಂಚಯ್ಯ, ಹನುಮಯ್ಯಅವರು ಅಂಬೇಡ್ಕರ್ ಅವರ ಕ್ರಾಂತಿಗೀತೆ ಹಾಡಿದರು.

ಅಂಚೆ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ, ಎಸ್. ರಾಮಪ್ರಸಾದ್ ಮೊದಲಾದವರು ಡಾ.ಅಮ್ಮಸಂದ್ರ ಸುರೇಶ್  ದಂಪತಿಯನ್ನು ಅಭಿನಂದಿಸಿದರು.

Key words:  Dr. Ammasandra Suresh -author -two book-release-mysore university- amshi prasanna kumar