ಮಂಡ್ಯ,ಜೂ,21,2019(www.justkannada.in): ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಚಲುವರಾಯಸ್ವಾಮಿ, ಅವರು ಹೇಳಿದ್ದಾರೆಂದರೇ ಸತ್ಯ ಅನ್ಸುತ್ತೆ. ಆ ರೀತಿಯ ವಾತಾವರಣ ನಮಗೆ ಕಂಡು ಬರ್ತಿಲ್ಲ. ಆದರೂ ದೇವೇಗೌಡರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ, ಎಲ್ಲಾ ಪಕ್ಷಗಳು ಇವತ್ತು ಅಭಿವೃದ್ಧಿ ಬಿಟ್ಟು ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿವೆ. ಇದೊಂದು ದೊಡ್ಡ ದುರಂತ. ಇದೆಲ್ಲವನ್ನೂ ನೋಡಿ ಜನ ಒಂದು ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಎಂದು ನುಡಿದರು.
ಮೈತ್ರಿ ಸರ್ಕಾರದಿಂದ ಜೆಡಿಎಸ್ ಗೆ ಭರ್ಜರಿ ಲಾಭ ಆಗಿದೆ….
‘ರಾಜ್ಯದ ರಾಜಕಾರಣ ಕವಲು ದಾರಿಯಲ್ಲಿ ಸಾಗ್ತಿದೆ. ಕಳೆದ ಒಂದು ವರ್ಷದಿಂದ ಸಮನ್ವಯ ಕಾಯ್ದುಕೊಂಡಿದ್ರೆ ಭಿನ್ನಾಭಿಪ್ರಾಯ ಬರುತ್ತಿರಲಿಲ್ಲ. ಈಗಲೂ ಸಮಯ ಮಿಂಚಿಲ್ಲ. ತಮ್ಮ ಮಾತು, ನಡವಳಿಕೆ ತಿದ್ದಿಕೊಂಡರೆ ಜೆಡಿಎಸ್ ಗೆ ಸರ್ಕಾರ ಮುಂದುವರಿಸುವ ಅವಕಾಶವಿದೆ. ಮೈತ್ರಿ ಸರ್ಕಾರದಿಂದ ಜೆಡಿಎಸ್ ಗೆ ಭರ್ಜರಿ ಲಾಭ ಆಗಿದೆ. ಜನರ ಸಮಸ್ಯೆಗೆ ಸ್ಪಂದಿಸಿದರೆ ಸರ್ಕಾರ ಉಳಿಯುತ್ತೆ ಎಂದು ಎಚ್ಚರಿಕೆ ನೀಡಿದರು
ಸದ್ಯಕ್ಕೆ ಚುನಾವಣೆ ಯಾರಿಗೂ ಅವಶ್ಯಕತೆ ಇಲ್ಲ. ಚುನಾವಣೆಯನ್ನ ಯಾರೂ ಭಯಸ್ತಿಲ್ಲ. ಬಿಜೆಪಿಯನ್ನ ಅಧಿಕಾರದಿಂದ ದೂರವಿಡುವ ಉದ್ದೇಶ ಕಾಂಗ್ರೆಸ್-ಜೆಡಿಎಸ್ ಪಕ್ಷದ್ದು. ಹೀಗಾಗಿ 37ಸೀಟು ಗೆದ್ದವರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ. ಫಲಿತಾಂಶ ಮನಸ್ಸಲ್ಲಿಟ್ಟುಕೊಳ್ಳದೆ ಸಮನ್ವಯತೆಯಿಂದ ಸರ್ಕಾರ ನಡೆಸಬೇಕು. ಎಂದು ಚಲುವರಾಯಸ್ವಾಮಿ ಸಲಹೆ ನೀಡಿದರು.
Key words: hd Deve Gowda- statement – true-Former MLA -Chaluvarayaswamy.