ಮೈಸೂರು,ಡಿಸೆಂಬರ್,11,2020(www.justkannada.in): ಗ್ರಾಮ ಪಂಚಾಯಿತಿ ಚುನಾವಣೆ ಕಣ ರಂಗೇರಿದ್ದು, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆ ದಿನವಾಗಿದೆ. ಗ್ರಾಮೀಣ ಭಾಗದಲ್ಲಿ ಡ ನಾಮಪತ್ರ ಸಲ್ಲಿಕೆ ಕಾರ್ಯಬಿರುಸುಗೊಂಡಿದೆ.
ಈ ನಡುವೆ ಮೈಸೂರಿನ 5 ತಾಲೂಕಿನ 148 ಗ್ರಾ.ಪಂಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮೈಸೂರಿನಲ್ಲಿ ಈವರೆಗೆ 2303 ಸ್ಥಾನಗಳಿಗೆ 3210 ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದೇ ಕಡೇ ದಿನವಾಗಿದೆ.
ಮತ್ತೊಂದೆಡೆ ಎರಡನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಎರಡನೇ ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ 3 ತಾಲ್ಲೂಕಿನ 102ಗ್ರಾ.ಪಂಗಳಿಗೆ ಚುನಾವಣೆ ನಡೆಯಲಿದೆ. ಮೈಸೂರು, ನಂಜನಗೂಡು, ನರಸೀಪುರ ತಾಲೂಕುಗಳಿಗೆ ಚುನಾವಣೆ ನಡೆಯಲಿದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಡಿ.16ನಾಮಪತ್ರ ಸಲ್ಲಿಸಲು ಕೊನೆಯ ದಿನ,ಡಿ.17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ.19ನಾಮಪತ್ರ ವಾಪಸ್ಸ್ ಪಡೆಯಲು ಕಡೆ ದಿನವಾಗಿದ್ದು, ಡಿ.27ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.30ರಂದು ಎರಡೂ ಹಂತ ಮತ ಎಣಿಕಾ ಕಾರ್ಯ ನಡೆಯಲಿದೆ.
Key words: Gram Panchayath- elections – first phase-today -submit – nomination-last date