ಮೈಸೂರು,ಡಿಸೆಂಬರ್,12,2020(www.justkannada.in) : ಯಾವುದೇ ವಿವಿಗಳನ್ನು ಸರಕಾರ ನಡೆಸುವುದಕ್ಕೆ ಆಗುತ್ತಿಲ್ಲ. ದೇಶದಲ್ಲಿ ಎಲ್ಲ ವಿವಿಗಳು ನೆಲಕಚ್ಚುತ್ತಿವೆ. ಯಾವ ಸರ್ಕಾರ, ರಾಜಕೀಯ ವ್ಯಕ್ತಿಗೂ ವಿವಿಗಳ ಮೇಲೆ ಗೌರವವಿಲ್ಲ. ಹೀಗಾಗಿ, ಮೈಸೂರು ವಿವಿಯನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಷಾದವ್ಯಕ್ತಪಡಿಸಿದರು.
ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿವಿಗಳ ಕುರಿತಂತೆ ಹಿಂದೆ ರಾಜಕೀಯ ನಾಯಕರಿಗೆ ಗೌರವವಿತ್ತು. ಆದರೆ, ಇಂದು ಇಲ್ಲ. ದೇಶದಲ್ಲಿಯೇ ಮೈಸೂರು ವಿವಿ 25 ವರ್ಷದಿಂದ ನಂ.6ಸ್ಥಾನದಲ್ಲಿದ್ದರೂ, ನಮ್ಮಲ್ಲಿ 75% ಸಿಬ್ಬಂದಿಯಿಲ್ಲ. ನೆನ್ನೆ ಎಂಎಸ್ಸಿ ಮುಗಿಸಿದವರು ಇಂದು ಎಂಎಸ್ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕೆ ಅತಿಥಿ ಉಪನ್ಯಾಸಕರಾಗಿ ಬರುತ್ತಾರೆ. ಹೀಗಾದರೆ, ವಿವಿ ಘನತೆ ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಒಂದು ವಿವಿಯನ್ನಾದರೂ, ಉಳಿಸಿಕೊಳ್ಳುವ ಕಾರ್ಯವಾಗಬೇಕಿದೆ. ಮೈಸೂರು ವಿವಿಗೆ ಹಳೆಯ, ಮತ್ತು ಒಳ್ಳೆಯ ಹೆಸರು ಇರುವುದರಿಂದ ಹೇಗೆ ನಡೆಯುತ್ತಿದೆ. ಬೇರೆ ವಿವಿಗಳಲ್ಲಿ ಚೇರ್, ಟೇಬಲ್ ಅಷ್ಟೇ ಇದೆ. ಹೀಗಾದರೆ, ಹೇಗೆ ನಡೆಸಲು ಸಾಧ್ಯ ಎಂದು ಬೇಸರವ್ಯಕ್ತಪಡಿಸಿದರು.
ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು 30% ಸಿಬ್ಬಂದಿ. ಸರಕಾರವು ಆ ಸಿಬ್ಬಂದಿಗೂ ಸಂಬಳ ಕೊಡುವುದಕ್ಕೆ ಕಷ್ಟ ಪಡುತ್ತಿದೆ. ಶಿಕ್ಷಣದಲ್ಲಿ ಗುಣಮಟ್ಟ ಬಯಸುವುದು ಹೇಗೆ. ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆದು ಮಾಡಿ ವಿವಿ ನಡೆಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಎಲ್ಲರೂ ಜೊತೆಗೂಡಿ ವಿವಿಯ ಬೆಳೆಸಬೇಕಿದೆ ಎಂದರು.
ವಿವಿಯಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರೋತ್ಸಾಹ ಇಲ್ಲದಂತ್ತಾಗಿದೆ. ಸರಕಾರಕ್ಕೆ ಒಲವು ಇಲ್ಲ. ಹೀಗಾಗಿ, ಅಸೋಸಿಯೇಷನ್ ಅಥವಾ ಪ್ರಪಂಚದ ವಿವಿಧೆಡೆ ಸಾಧನೆ ಮಾಡಿರುವ ವಿವಿಯ ವಿದ್ಯಾರ್ಥಿಗಳು ಸಹಾಯ ಮಾಡಿದರೆ ಸರ್ಕಾರದ ನೆರವು ಇಲ್ಲದೆಯೇ ವಿವಿಯನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅಸೋಸಿಯೇಷನ್ ವತಿಯಿಂದ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಗುರುತಿಸಿ ಫೆಲೋಶಿಪ್ ನೀಡುವ ಯೋಜನೆ ರೂಪಿಸಿದ್ದು, ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.
ಕಾಶ್ಮೀರ್ ವಿವಿ ವಿಶ್ರಾಂತ ಕುಲಪತಿ ಪದ್ಮಶ್ರೀ ಜೆ.ಎ.ಕೆ.ತರೀನ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈ.ವಿ.ವಿ.ಹಿ.ವಿ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಾಪುರ ಇತರರು ಇದ್ದರು.
English summary….
Functioning of universities in the Country has become difficult: Prof. K.S. Rangappa
Mysuru, Dec. 12, 2020 (www.justkannada.in): “The government is not in a position to run the universities in the country today. It has become very difficult for all the universities to function to its full potential. Unfortunately, neither the government nor none of the politicians have any respect for the Universities. Therefore, we need to save at least Mysore University,” opined Prof. K.S. Rangappa, former Vice-Chancellor, Mysore University.
Speaking at a felicitation function held for achievers at the Rani Bahaddur auditorium in Mysuru today, he said, “in earlier days politicians had respect towards universities. But now it is absent. Mysore University has maintained 6th rank in the country for the last 25 years. Despite this, there the university lacks 75% of staff. As a result of this, those who completed M.Sc. yesterday are coming to teach M.Sc. students here from the next day, as guest lecturers. How can the reputation of this university remain in such a situation? he questioned.
“We should save at least one university in our State. Mysore University is still functioning because of the reputation it has gained over the decades. The situation of other universities in the State is worse. It has become impossible to run the universities,” he lamented. He also added that majority of the universities are functioning with only 30% of staff and cannot afford to pay their salaries. It is impossible to collect more fees from the students also, as it will result in social injustice. Hence, everyone should join hands, he observed.
Keywords: Prof. K.S. Rangappa/ Mysore University/ Reputation of universities
key words :Vivi-bites-all-over-country-VV-government- political-figures-No-Respect-Prof.K.S.Rangappa-regrets