ಮೈಸೂರು,ಡಿಸೆಂಬರ್,13,2020(www.justkannada.in) : ಗಂಜಲದ ವಾಸನೆ ಗೊತ್ತಿಲ್ಲ, ಬೆರಣಿ ತಟ್ಟಿಲ್ಲ. ಹಸು, ದನ ಮೇಯಿಸಿಲ್ಲ, ಇದೆಲ್ಲ ಮಾಡದವರು ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದಾರೆ. ವಯಸ್ಸಾದ ಹಸುಗಳನ್ನ ಹೇಗೆ ಸಾಕಬೇಕು ಎಂಬುದು ನಮಗೆ ಗೊತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದ್ದಾರೆ.ಸರ್ಕಾರ ತರಾತುರಿಯಲ್ಲಿ ಅಜೆಂಡ್ ಇಲ್ಲದೆ, ಕರಡು ಪ್ರತಿ ನೀಡದೆ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಪಾಸ್ ಆಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಬೇಸರವ್ಯಕ್ತಪಡಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಹೋರಾಟ ಮಾಡಿದ್ರು, ಬೇಡ ಅಂದ್ರು ಕೇಳಿಲ್ಲ. ಇದನ್ನ ತಮಗೆ ಇಷ್ಟಬಂದ ಹಾಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಉಪಯುಕ್ತವಾದ ಜಾನುವಾರು ರೈತ ಮಾರೋದಿಲ್ಲ. ಕೇವಲ ಅನುಪಯುಕ್ತವಾದ ಜಾನುವಾರು ಮಾತ್ರ ಸಂತೆಲಿ ಮಾರ್ತಾನೆ. ಜಾನುವಾರುಗಳ ಬಗ್ಗೆ ತಿಳಿಯದವರು ಈ ಖಾಯ್ದೆ ತಂದಿದ್ದಾರೆ. ಈ ಕಾಯ್ದೆಯನ್ನ ರೈತ ಸಂಘ ತೀವ್ರವಾಗಿ ಖಂಡಿಸುತ್ತೆ ಎಂದಿದ್ದಾರೆ.
ಈಗ ಗೋ ರಕ್ಷಣೆ ಮಾಡೋದು ಸರ್ಕಾರದ ಕೆಲಸ ಆಗಬೇಕು. ಬೀದಿಯಲ್ಲಿ ಓಡಾಡುವವರೆಲ್ಲ ಗೋ ರಕ್ಷಕರಲ್ಲ. ನಿಜವಾದ ಗೋ ರಕ್ಷಕ ಮಣ್ಣಿನ ಮಗ ರೈತ ಎಂದು ತಿಳಿಸಿದ್ದಾರೆ.
key words : berries-not-patched-cow-not-cattle-grazing-Go Killing-Act-brought-Leader-Nagendra Kidi