ಬೆಂಗಳೂರು, ಡಿಸೆಂಬರ್,14,2020(www.justkannada.in): ಹಿರಿಯ ಸಾಹಿತಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದ ಎ.ಪಂಕಜಾ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ.
ಕನ್ನಡ ಕಾದಂಬರಿ ಪ್ರಕಾರದಲ್ಲಿ ಪಂಕಜಾ ಅವರದ್ದು ಬಹುದೊಡ್ಡ ಹೆಸರು. ಸುಮಾರು 50ಕ್ಕೂ ಕಾದಂಬರಿಗಳನ್ನು ರಚಿಸಿ, ಅವುಗಳಲ್ಲಿ ಸ್ತ್ರೀಪರ ಸಂವೇದನೆ, ತಲ್ಲಣ ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸಿದ್ದಾರೆ. ಜತೆಗೆ; ಶಿಕ್ಷಕಿಯಾಗಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕಿಯಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ.
ಪಂಕಜಾ ಅವರ ನಿಧನ ಬಹುದೊಡ್ಡ ನಷ್ಟ. ಅವರಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಾರ್ಥಿಸಿದ್ದಾರೆ.
English summary….
A Pankaja
Kannada novelist, social worker and founder of Mahila cooperative bank , Bangalore
Born in Pavagada to a musician family on 20-4-1932
During her school & college days, she was greatly involved in all cultural activities
She has obtained a vidwan degree in Hindi language and the dramas which were written by her have been broadcasted in AIR (All India radio)
She has also translated various books from Hindi, English & Telugu into Kannada
Post this she became a novelist in Kannada language and has written social, mythological and detective novels numbering more than 50.
2 of her books have won national awards namely Sogasu Gathi & kaagadada Dhoni.
She also also worked as a teacher in various schools & institutions
Some of the awards she has won include Galaganatha prashasti, Attimabbe prashasti, Kannada sahitya ratna prashasti. Kempegowda prashasti.
Key words: DCM Ashwath Narayan- Kambani -social worker -Pankaja.- death