ನವದೆಹಲಿ,ಡಿಸೆಂಬರ್,22,2020(www.justkannada.in): ವೇಗವಾಗಿ ಹರಡುವ ಬ್ರಿಟನ್ ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೋನಾ ಸೋಂಕು ಭಾರತದಲ್ಲಿ ಪತ್ತೆಯಾಗಿಲ್ಲ. ಸದ್ಯ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೋವಿಡ್ ಲಸಿಕೆ ವಿಭಾಗದ ಮುಖ್ಯಸ್ಥ ಡಾ.ವಿ.ಕೆ ಪೌಲ್ ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್ 19 ಸೋಂಕಿನ ಬೆಳವಣಿಗೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್ 19 ಸ್ಪೆಷಲ್ ಟಾಸ್ಕ್ ಪೋರ್ಸ್ ನ ಡಾ.ವಿಕೆ ಪೌಲ್, ಕ್ಷಿಪ್ರವಾಗಿ ಹರಡಬಲ್ಲ ರೂಪಾಂತರ ಹೊಂದಿದ ನೂತನ ಕೋವಿಡ್ 19 ಸೋಂಕು ಬ್ರಿಟನ್ ನಲ್ಲಿ ತೀವ್ರವಾಗಿ ಹರಡುತ್ತಿದೆ. ಆದರೆ ಭಾರತದಲ್ಲಿ ಈವರೆಗೂ ಹೊಸ ಪ್ರಭೇದದ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೇ ಎಚ್ಚರಿಕೆ ಅಗತ್ಯ ಎಂದು ತಿಳಿಸಿದ್ದಾರೆ.
ಬ್ರಿಟನ್ʼನಿಂದ ಬಂದವರ ಕುರಿತು ಮಾಹಿತಿ ಸಂಗ್ರಹಿಸಲಾಗ್ತಿದೆ. ಡಿ.5ರಿಂದ ಬಂದ ಎಲ್ಲ ಪ್ರಯಾಣಿಕರ ಮಾಹಿತಿ ಕಲೆಹಾಕಲಾಗುತ್ತಿದೆ. ಇನ್ನು ಹೊಸ ಕೊರೊನಾ ಅಷ್ಟೇನು ಮಾರಕವಲ್ಲ. ಅದು ವೇಗವಾಗಿ ಹರಡುತ್ತಿದೆ ಎಂದ ಮಾತ್ರಕ್ಕೆ ಮಾರಕ ಎಂದರ್ಥವಲ್ಲ ಎಂದು ಡಾ.ವಿ.ಕೆ ಪೌಲ್ ತಿಳಿಸಿದರು.
Key words: Don’t worry- No -new species – corona infection –no found – country-Dr. WK Paul.