ಮೈಸೂರು,ಡಿಸೆಂಬರ್,23,2020(www.justkannada.in): ಇಂಗ್ಲೇಂಡ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ ಇದೀಗ ಎಲ್ಲೆಡೆ ಭೀತಿಯನ್ನುಂಟು ಮಾಡಿದ್ದು, ಈ ಹಿನ್ನೆಲೆ ಬ್ರಿಟನ್ ನಿಂದ ಆಗಮಿಸಿರುವ ಏಳು ಮಂದಿಗೆ ಮೈಸೂರಿಗರಿಗೆ ಕೊರೋನಾ ಟೆಸ್ಟ್ ಗೆ ಸಿದ್ಧತೆ ನಡೆಸಲಾಗುತ್ತಿದೆ.
ಆರೋಗ್ಯ ಇಲಾಖೆ ಹಾಗೂ ಪಾಲಿಕೆ ತಂಡದಿಂದ ಕೊರೊನಾ ಪರೀಕ್ಷೆಗೆ ಸಿದ್ದತೆ ನಡೆಸಲಾಗುತ್ತಿದೆ. ಮೊಬೈಲ್ ಟೆಸ್ಟಿಂಗ್ ತಂಡ ಮನೆಗೆ ತೆರಳಿ ಕೊರೋನಾ ಪರೀಕ್ಷೆ ನಡೆಸಲಿದ್ದು, ಈ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಆರೋಗ್ಯ ಇಲಾಖೆ ಸಂಪರ್ಕದಲ್ಲಿದ್ದಾರೆ.
ಬ್ರಿಟಿನ್ ನಿಂದ ಹಿಂದಿರುಗಿದ 85 ಮಂದಿ ಪ್ರಯಾಣಿಕರ ಪೈಕಿ ಏಳು ಮಂದಿ ಮೈಸೂರಿನವರು. ಈಗಾಗಲೆ ಅಧಿಕಾರಿಗಳು ಏಳು ಮಂದಿಯ ಮೊಬೈಲ್ ನಂ, ಮನೆ ವಿಳಾಸದ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಏಳು ಮಂದಿಯೊಡನೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕದಲ್ಲಿದ್ದಾರೆ.
ಬ್ರಿಟನ್ ನಿಂದ ಬಂದವರಿಗೆ ಮನೆಯಲ್ಲೇ ಕ್ವಾರಂಟೈನ್ ಗೆ ಒಳಪಡುವಂತೆ ಸೂಚನೆ ನೀಡಲಾಗಿದ್ದು, ಇಂದು ಮಧ್ಯಾಹ್ನ ಒಳಗೆ ಎಲ್ಲಾ ಏಳು ಮಂದಿಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೋನಾ ಟೆಸ್ಟ್ ಮಾಡಲಿದ್ದಾರೆ. ಆರ್ ಟಿಪಿಸಿಆರ್ ಹಾಗೂ ಆಂಟಿಜೆನ್ ಎರಡೂ ಟೆಸ್ಟ್ ಮಾಡಲಿದ್ದಾರೆ.
Key words: specter – transformational –corona-Seven Mysorers – Britain –Corona test- today