ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಆಂಬುಲೆನ್ಸ್, 4 ವೈದ್ಯರ ನೇಮಕ…!

ಬೆಂಗಳೂರು,ಡಿಸೆಂಬರ್,24,2020(www.justkannada.in)  : ಇಡೀ ದೇಶಕ್ಕೆ ಮಾದರಿಯಾಗುವಂತ ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಬದಲಾವಣೆ ಮಾಡಲಾಗುವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬುಲೆನ್ಸ್ ನೀಡಲಾಗುತ್ತದೆ. ಈಗ ಇದ್ದಂತ ಓರ್ವ ವೈದ್ಯರ ಜೊತೆಗೆ ನಾಲ್ಕು ವೈದ್ಯರನ್ನು ನೇಮಕ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.Teachers,solve,problems,Government,bound,Minister,R.Ashok

ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಬೆಡ್ ಗಳನ್ನು 12 ರಿಂದ 20 ಹಾಸಿಗೆಗೆ ಹೆಚ್ಚಳ ಮಾಡಲಾಗುತ್ತದೆ. ಈ ಮೂಲಕ ರಾಜ್ಯದ ಆರೋಗ್ಯ ಕೇಂದ್ರಗಳನ್ನು ಮತ್ತಷ್ಟು ಆರೋಗ್ಯ ಸೇವೆ ಒದಗಿಸುವ ಮೂಲಕ, ಆಯಾ ಜಿಲ್ಲೆಯಲ್ಲಿಯೇ ಜನರಿಗೆ ಆರೋಗ್ಯ ಸೇವೆ ಒದಗಿಸುವಂತ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತಿದೆ ಎಂದರು.

ಕೇರಳ ಮತ್ತು ತಮಿಳುನಾಡಿನಲ್ಲಿ ಸಮುದಾಯ ಆರೋಗ್ಯ ಸೇವೆಯಲ್ಲಿ ಉತ್ತಮವಾಗಿವೆ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು, ಇಡೀ ಭಾರತದಲ್ಲೇ ಕರ್ನಾಟಕದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು ಎಂಬುದಾಗಿ ನಿರ್ದೇಶನ ನೀಡಿದ್ದಾರೆ. ಇಂತಹ ಕನಸಿಗೆ ಸಕಾರಗೊಳಿಸುವಂತ ನಿಟ್ಟಿನಲ್ಲಿ ಪೂರಕವಾಗಿ ರಾಜ್ಯದಲ್ಲಿ ಇರುವಂತ 2,380 ಪ್ರಾಥಮಿಕ ಕೇಂದ್ರಗಳು ಏನಿದ್ದಾವೆ. ಇವೆಲ್ಲದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ಹೇಳಿದರು.

30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಸಮತೋಲನ ಇರುವ ಕಡೆಯಲ್ಲಿ ಸರಿ ಪಡಿಸಬೇಕು. ಅಲ್ಲದೇ ಮೇಲ್ದರ್ಜೆಗೆ ಏರಿಸುವಂತ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಇಂತಹ ವೈದ್ಯರಲ್ಲಿ ಒಬ್ಬರು ಮಹಿಳಾ ವೈದ್ಯರಿರುತ್ತಾರೆ. ಒಬ್ಬರು ಆಯುಷ್ ವೈದ್ಯರು ಇರುತ್ತಾರೆ ಎಂದರು.

ಮುಂಬರುವ ಹೊಸ ವರ್ಷದಲ್ಲಿ, ಇದನ್ನು ಜಾರಿಗೊಳಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಕ್ರಾಂತಿಕಾರ ಬದಲಾವಣೆ ಆಗಲಿದೆ. ಮಾದರಿ ಪಿಹೆಚ್ ಸಿ ಬಗ್ಗೆಯೂ ಮಾಹಿತಿ ನೀಡಲಾಗಿದೆ. ವೈದ್ಯರು ಗ್ರಾಮೀಣ ಭಾಗಕ್ಕೆ ಸೇವೆಗೆ ಯಾಕೆ ಹೋಗ್ತಾ ಇರಲಿಲ್ಲ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಗುಣಮಟ್ಟದ ವಸತಿ ಸಮುಚ್ಥಯ ನಿರ್ಮಾಣ ಮಾಡಿ, ವೈದ್ಯರು, ನರ್ಸ್ ಗಳು, ಇತರೆ ಆರೋಗ್ಯ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ವೆಚ್ಚ ಹೇಗೆ ಇರುತ್ತದೆ ಎಂದರೆ, 2 ಎಕರೆ ವ್ಯಾಪ್ತಿಯಲ್ಲಿ ಇರಲಿದೆ. ಕನಿಷ್ಠ 6 ರಿಂದ 8 ಕೋಟಿರ ರೂಪಾಯಿ ವೆಚ್ಚದ ಮೂಲಕ ಹೊಸ ಮಾದರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಪುನರ್ ರಚನೆ ಮಾಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಚಿಕಿತ್ಸೆ, ಮೂರು ಮಹಿಳಾ, ಮೂರು ಪುರುಷರ ವಾರ್ಡ್ ಗಳಲಿವೆ. ಒಂದು ಲ್ಯಾಬ್ ಇರಲಿದೆ. ಪ್ರತಿಯೊಂದು ಸೇವೆಯೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

 

Every-primary- 1 ambulance-health-center-4 doctor's-appointment ...!

ಆರೋಗ್ಯ ಕ್ಷೇತ್ರದಲ್ಲಿ ಇಂತಹ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ. ಈ ವರ್ಷದ ಅಯ-ವ್ಯಯದಲ್ಲಿ ಇದಕ್ಕೆ ಹಣ ಕೂಡ ನಿಗದಿಯಾಗಲಿದೆ. ಈಗ ಬಂದಿರುವಂತ ಕೋವಿಡ್ ನಂತರ ರೋಗದ ಸಂದರ್ಭದಲ್ಲಿ ಎದುರಿಸುವಂತ ಆರೋಗ್ಯ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

key words : Every-primary- 1 ambulance-health-center-4 doctor’s-appointment …!