ಮೈಸೂರು,ಡಿಸೆಂಬರ್,24,2020(www.justkannada.in): ಟಿಪ್ಪರ್ ಬೈಕ್ ನಡುವೆ ಅಪಘಾತ ಸಂಭವಿಸಿ ಪತ್ನಿ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿದ್ದ ಮಹಿಳೆ ರತ್ನಮ್ಮ ( 60 ) ಸಾವನ್ನಪ್ಪಿದ್ದಾರೆ. ಪತಿ ಸತ್ಯನಾರಾಯಣ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರತ್ನಮ್ಮ ಹುಣಸೂರು ಟಿಎಪಿಸಿಎಂಎಸ್ ಸದಸ್ಯೆ ಹುಣಸೂರು ಪಟ್ಟಣದ ಕಚೇರಿಯಲ್ಲಿ ಸಭೆ ಮುಗಿಸಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಟಿಪ್ಪರ್ ಚಾಲಕನ ಅತಿ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಟಿಪ್ಪರ್ ಹಾಗೂ ಚಾಲಕನನ್ನ ಹುಣಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: TIPPER -collision –between- bike- Wife –dies-Serious injury – husband-mysore