ಗ್ರಾಪಂ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ: ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ….

ಮೈಸೂರು,ಡಿಸೆಂಬರ್,29,2020(www.justkannada.in):  ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತ್ ಚುನಾವಣೆ ಮತದಾನ ಈಗಾಗಲೇ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ನಾಳೆ ಮತ ಎಣಿಕೆ ಕಾರ್ಯ ನಡೆಯಲಿದ್ದು ಅಭ್ಯರ್ಥಿಗಳ ಎದೆಯಲ್ಲಿ‌ ಶುರುವಾಯ್ತು ಢವ ಢವ ಶುರುವಾಗಿದೆ. ಇನ್ನು ಈಗಾಗಲೇ ಹಳ್ಳಿಗಳ ಕಟ್ಟೆಗಳಲ್ಲೆ ಸೋಲು ಗೆಲುವಿನ ಲೆಕ್ಕಚಾರ ಆರಂಭವಾಗಿದೆ. ಈ ಮಧ್ಯೆ ಮೈಸೂರು ಜಿಲ್ಲೆಯ 250  ಗ್ರಾಮ ಪಂಚಾಯತಿಗಳ ಫಲಿತಾಂಶ ನಾಳೆ ಬಹಿರಂಗವಾಗಲಿದ್ದು  ಮತ ಎಣಿಕೆಗೆ ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ.

ಮೈಸೂರಿನ ೮ ತಾಲ್ಲೂಕುಗಳಲ್ಲು ಮತ ಎಣಿಕೆಗೆ ‌ಜಿಲ್ಲಾಡಳಿತ ಸಿದ್ದತೆ ನಡೆಸುತ್ತಿದ್ದು,ನಾಳೆ ಬೆಳಿಗ್ಗೆ 8 ಗಂಟೆಯಿಂದ ‌ ಎಣಿಕೆ‌ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮತ ಎಣಿಕೆಗಾಗಿ ಜಿಲ್ಲೆಯಾದ್ಯಂತ 191 ಕೊಠಡಿಗಳನ್ನ ಸಿದ್ದತೆ ಮಾಡಲಾಗಿದೆ.

ಮೈಸೂರು ತಾಲೂಕಿನ ಮತ ಎಣಿಕೆಗಾಗಿ ನಗರದ ಮಹಾರಾಣಿ ಕಾಲೇಜಿನಲ್ಲಿ‌ 5 ಕೊಠಡಿ 58 ಮೇಜು, ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 39 ಕೊಠಡಿ,78 ಮೇಜುಗಳು, ನರಸೀಪುರ ವಿದ್ಯೋದಯ ಶಾಲೆಯಲ್ಲಿ‌ 36 ಕೊಠಡಿ, 90 ಮೇಜು, ಹುಣಸೂರು ಸಂತ ಜೋಸೆಫ್ ಶಾಲೆಯಲ್ಲಿ, 15 ಕೊಠಡಿ, 70 ಮೇಜು, ಪಿರಿಯಾಪಟ್ಟಣ ಪುಷ್ಪ ಕಾನ್ವೆಂಟ್ ನಲ್ಲಿ 25 ಕೊಠಡಿ,70 ಮೇಜು ,ಕೆ ಆರ್ ನಗರ ಸರ್ಕಾರಿ ಪ್ರಥಮ ದರ್ಜೆ‌ ಕಾಲೇಜು 15 ಕೊಠಡಿ, 70 ಮೇಜು, ಹೆಚ್ ಡಿ ಕೋಟೆ ಸೇಂಟ್ ಮೇರಿಸ್ ಶಾಲೆಯ 20 ಕೊಠಡಿ , 59  ಮೇಜು, ಸರಗೂರು ಹೆಚ್ ಡಿ ಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 10 ಕೊಠಡಿ, 30 ಮೇಜುಗಳ‌  ಸ್ಥಾಪನೆ  ಮಾಡಲಾಗಿದೆ.countdown-grama-panchayath-voting-counting-prepared-mysore-district

ಮತ ಎಣಿಕೆ ಒಳಗೆ‌ ಹೋಗಲು‌ ಅಭ್ಯರ್ಥಿ, ಏಜೆಂಟ್ ಗಳು‌ ಸಂಬಂಧಪಟ್ಟ ಅಧಿಕಾರಿಗಳಿಂದ ಗುರುತಿನ‌ ಚೀಟಿ ಕಡ್ಡಾಯವಾಗಿದೆ. ಅಧಿಕಾರಿಗಳು‌‌ ಸೇರಿದಂತೆ ಎಲ್ಲರಿಗೂ ಥರ್ಮಲ್ ಸ್ಕ್ರಿನೀಂಗ್,ಮಾಸ್ಕ್, ಸ್ಯಾನಿಟೈಸಿಂಗ್ ಕಡ್ಡಾಯ ಮಾಡಲಾಗಿದೆ.

ENGLISH SUMMARY….

Countdown begins for GP election counting: Mysuru District Administration all set
Mysuru, Dec. 29, 2020 (www.justkannada.in): The two phases of Gram Panchayat elections have been completed and the fate of the candidates are locked in the booths.
The counting will begin tomorrow. The result of 250 gram panchayats in Mysuru District will be decided tomorrow. The District Administration has made all preparations for the counting.countdown-grama-panchayath-voting-counting-prepared-mysore-district
Counting will be held in 8 taluks and will begin at 8.00 am tomorrow. 191 rooms have been prepared across the district for the counting.
Keywords: GP elections/ Counting/ tomorrow/ Mysuru Taluk

Key words: Countdown –grama panchayath –voting- counting-Prepared – Mysore District.