ಪೊಲೀಸ್ ಇಲಾಖೆ ಮಾದರಿಯಲ್ಲಿ ಅಬಕಾರಿ ಇಲಾಖೆಯಲ್ಲೂ ಆಡಳಿತಾತ್ಮಕ ಮಾರ್ಪಾಡಿಗೆ ಆದೇಶ…!

ಬೆಂಗಳೂರು,ಡಿಸೆಂಬರ್,30,2020(www.justkannada.in) : ಪೊಲೀಸ್ ಇಲಾಖೆ ಮಾದರಿಯಲ್ಲಿ ಅಬಕಾರಿ ಇಲಾಖೆಯಲ್ಲೂ ಸಹ ವಿಶಿಷ್ಟ ರೂಪದಲ್ಲಿ ಆಡಳಿತಾತ್ಮಕ ಮಾರ್ಪಾಡನ್ನು ಜಾರಿಗೊಳಿಸಿ ಅಬಕಾರಿ ಸಚಿವ ಎಚ್.ನಾಗೇಶ್ ಅವರ ನೇತೃತ್ವದಲ್ಲಿ ಅಬಕಾರಿ ಸಚಿವಾಲಯವು ಆದೇಶ ಹೊರಡಿಸಿದೆ.ಅಬಕಾರಿ ಇಲಾಖೆ ಒಳಗೆ ಅಬಕಾರಿ ರಕ್ಷಕರು ಹಾಗೂ ಅಬಕಾರಿ ಹಿರಿಯ ರಕ್ಷಕರ ಹುದ್ದೆಗಳನ್ನು ಪದನಾಮೀಕರಿಸುವ ಮೂಲಕ ಅವರಿಗೆ ಕ್ರಮವಾಗಿ ಅಬಕಾರಿ ಕಾನ್ಸ್ಟೆಬಲ್ ಹಾಗೂ ಅಬಕಾರಿ ಮುಖ್ಯ ಕಾನ್ಸ್ಟೆಬಲ್ ಎಂಬುದಾಗಿ ಪದನಾಮಕರಣ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ(ಅಬಕಾರಿ) ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳಾ ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಡಳಿತಾತ್ಮಕವಾಗಿ ಇದೊಂದು ಮಹತ್ವದ ನಿರ್ಧಾರವಾಗಿದ್ದು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ ಪಾಲಿಗೆ ಅತ್ಯಂತ ವಿಶೇಷವಾದ ಸಂಗತಿಯಾಗಿದೆ. ಈ ಒಂದು ಐತಿಹಾಸಿಕ ನಿರ್ಧಾರವನ್ನ ಕೈಗೊಳ್ಳುವ ಮೂಲಕ ಅಬಕಾರಿ ಸಚಿವ ಎಚ್.ನಾಗೇಶ್ ಅವರು ಅಬಕಾರಿ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದ್ದಾರೆ.

Police-Department-model-Even-excise-department-Order-administrative-modification ...!ಈಗಾಗಲೇ ವೇತನ ಶ್ರೇಣಿ ಬದಲಾವಣೆ ಹಾಗೂ ವೃಂದ ಮತ್ತು ನೇಮಕಾತಿ ಸಂಬಂಧ ಮತ್ತೊಂದು ಮೈಲುಗಲ್ಲು ಸಾಧಿಸಲು ಹೊರಟಿರುವ ಸಚಿವರ ಈ ನಡೆಯನ್ನು ಮೆಚ್ಚಿ ಅಬಕಾರಿ ಇಲಾಖೆ ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಮೈಸೂರು ಅಬಕಾರಿ ಇಲಾಖಾ ಸಿಬ್ಬಂದಿಗಳ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಜಿಲ್ಲಾ ಘಟಕ ನಿರ್ದೇಶಕ, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ.ಪಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

English summary…..

Like Police Dept. administrative changes made to Excise Dept.
Bengaluru, Dec. 30, 2020 (www.justkannada.in): The Excise Secretariat has issued orders implementing administrative changes to the Excise Department like in the Police Department, under the leadership of Excise Minister H. Nagesh.Police-Department-model-Even-excise-department-Order-administrative-modification ...!
The designations of Excise Inspector and Excise Senior Inspectors have been changed as Excise Constable and Excise Head Constable respectively, according to a press release issued by Manjula Nataraj, Under Secretary to the Govt., Finance Department (Excise).
Administratively it is a significant move taken by Excise Minister H. Nagesh, and it will be very special for the staff who are serving in the Excise Department. With this change, the Excise Minister has paved way for a revolutionary change.
The Excise Department staff have started thanking the Minister who has already proposed for change in salaries and appointments.
Raghavendra P, Director, Mysuru District Unit, Sports Secretary, Karnataka State Government Employees Association, has thanked the Minister on behalf of the Excise Department staff of Mysuru District.
Keywords: Excise Department/ Administrative changes/ Excise Minister H. Nagesh.

 

key words : Police-Department-model-Even-excise-department-Order-administrative-modification …!