ಮಂಡ್ಯ,ಜನವರಿ,01,2021(www.justkannada.in) : ಶಾಲೆಗಳಿಗೆ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಶಿಕ್ಷಕರು ಶಾಲೆಗಳಿಗೆ ಮಕ್ಕಳನ್ನು ಕರೆತರಲು ವಿನೂತನ ಪ್ರಯತ್ನ ಮಾಡಿದ್ದಾರೆ.ಮಂಡ್ಯ ಜಿಲ್ಲೆಯ ಹೊನ್ನನಾಯಕಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶಾಲೆಯ ಹಬ್ಬದ ವಾತಾವರಣ ಕಂದು ವಿಧ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಶಾಲಾ ಆವರಣದಲ್ಲಿ ಸ್ಯಾನಿಟೈಸರ್ ಮಾಡಿ ಗುಲಾಬಿ ಹೂ ನೀಡಿ ಶಿಕ್ಷಕರು ಸ್ವಾಗತಿಸಿದರು.
ಸರ್ಕಾರದ ಸೂಚನೆಯಂತೆ 6 ರಿಂದ 9ನೇ ತರಗತಿ ಮಕ್ಕಳಿಗೆ ವಿಧ್ಯಾಗಮ ಆರಂಭಿಸಿದ್ದು, ಮಾಸ್ಕ್ ಧರಿಸಿ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳು. 10 ತಿಂಗಳ ಬಳಿಕ ಶಾಲೆ ಪ್ರಾರಂಭಿಸಿದ್ದಕ್ಕೆ ವಿಧ್ಯಾರ್ಥಿಗಳು ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರಕೊರೋನಾ ವೈರಸ್ ನಿಂದ ಕಳೆದ 10 ತಿಂಗಳಿಂದ ಬಾಗಿಲು ಮುಚ್ಚಿದ್ದ ಶಾಲೆಗಳು. ಸರ್ಕಾರದ ಧೃಡ ನಿರ್ಧಾರದಿಂದ ಹೊಸ ವರ್ಷದ ಆಚರಣೆಯೊಂದಿಗೆ ಇಂದಿನಿಂದ ಆರಂಭಗೊಂಡಿವೆ.
key words : Breed-Swag-tied-Welcome-Students-Excitement- government-school …!