ಬೆಂಗಳೂರು,ಜನವರಿ,1,2021(www.justkannada.in): ನಾಳೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಹಿತಿ ನೀಡಿದ ಸಚಿವ ಸುಧಾಕರ್, ಕರ್ನಾಟಕದ 5 ಜಿಲ್ಲೆಗಳನ್ನು ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಯಲಿದೆ. ಆ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಯಲಿದೆ. ಇನ್ನು ಲಸಿಕೆ ಬಂದ ತಕ್ಷಣ ರಾಜ್ಯದ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ವ್ಯಾಕ್ಸಿನ್ ನೀಡುವಾಗ ಅನುಸರಿಸಬೇಕಾದ ಹಂತಗಳ ಕುರಿತು ಡ್ರೈ ರನ್ ನಡೆಸಲಾಗುತ್ತಿದೆ. ವ್ಯಾಕ್ಸಿನ್ ಹಾಕುವುದನ್ನು ಬಿಟ್ಟು ಉಳಿದೆಲ್ಲ ಹಂತಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಡ್ರೈ ರನ್ ನಲ್ಲಿ ಪಾಲಿಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.
English summary…
Covid vaccine dry run in 5 districts from tomorrow – Minister Dr. K. Sudhakar
Bengaluru, Jan. 01, 2020 (www.justkannada.in): Health and Medical Education Minister Dr. K. Sudhakar today informed that a COVID vaccine dry run will be held in five districts in the State from tomorrow.
Sharing information about this Minister Sudhakar explained that a dry run would be held in the district, taluk headquarters, and primary health centers of Bengaluru, Belagavi, Kalaburagi, Mysuru, and Shivamogga Districts. The public vaccination programme will begin once the vaccine is received.
The dry run is being held to understand the phases that have to be followed while providing the vaccine. Apart from administering vaccination to the public, efforts will be made to understand and explain to the workers about all other phases that need to be followed, he added.
Keywords: COVID vaccine dry run from tomorrow/ Minister Dr. K. Sudhakar/ five districts
Key words: covid Vaccine- Dry Run- tomorrow -5 districts – state-Minister-k.sudhakar