ಬೆಂಗಳೂರು, ಜನವರಿ ೦4,2021:(www.justkannada.in news ) ಬಹುನಿರೀಕ್ಷಿತ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸೇವೆಯ ಕನಸು ಸಾಕಾರಗೊಂಡಿದೆ. ಬಹಳ ವರ್ಷಗಳ ಕಾಯುವಿಕೆಯ ನಂತರ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್‌ಗೆ ರೈಲು ಸೇವೆ ಇಂದಿನಿಂದ ಆರಂಭವಾಯಿತು.
ಸಂತಸದ ಸಂಗತಿ ಅಂದ್ರೆ, ಪ್ರಯಾಣ ದರ ಕೇವಲ 10 ರೂ. ಮಾತ್ರ ನಿಗಧಿ ಪಡಿಸಿರುವುದು. ರೈಲ್ವೆ ಇಲಾಖೆಯ ಈ ಕ್ರಮ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸೋಮವಾರ ಬೆಳಿಗ್ಗೆ ೪.೪೫ರ ವೇಳೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲ ರೈಲು ಹೊರಟು ವಿಮಾನ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಿರುವ ಹಾಲ್ಟ್ ಸ್ಟೇಷನ್ ಅನ್ನು ಬೆಳಿಗ್ಗೆ ೫.೫೦ಕ್ಕೆ ತಲುಪಿತು. ನೈಋತ್ಯ ರೈಲ್ವೆ ಹೊಸದಾಗಿ ಯಲಹಂಕದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸೇವೆಗೂ ಸಹ ಸೋಮವಾರ ಚಾಲನೆ ನೀಡಿತು. ಇಂದಿನಿಂದ ಐದು ಜೊತೆ ರೈಲು ಸೇವೆಗಳು ಈ ಮಾರ್ಗದಲ್ಲಿ ಸಂಚರಿಸಲಿವೆ.
ವೇಳಾಪಟ್ಟಿ:
ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಗೆ:
ಮೆಜೆಸ್ಟಿಕ್‌ನಿಂದ – ಬೆಳಿಗ್ಗೆ ೪.೪೫ಕ್ಕೆ ಹೊರಟು ೫.೫೦ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪುತ್ತದೆ
ಯಲಂಹಕದಿಂದ – ಬೆಳಿಗ್ಗೆ ೭.೦೦ಕ್ಕೆ ಹೊರಟು, ೭.೨೦ಕ್ಕೆ ತಲುಪುತ್ತದೆ
ಯಶವಂತಪುರದಿಂದ – ಬೆಳಿಗ್ಗೆ ೮.೩೦ಕ್ಕೆ ಹೊರಡುವ ರೈಲು ೯.೧೭ಕ್ಕೆ ತಲುಪುತ್ತದೆ.
ಕಂಟೋನ್‌ಮೆಂಟ್‌ನಿಂದ – ಬೆಳಿಗ್ಗೆ ೫.೫೫ಕ್ಕೆ ಹೊರಟು, ೬.೫೦ಕ್ಕೆ ತಲುಪುತ್ತದೆ
ಮೆಜೆಸ್ಟಿಕ್ ನಿಂದ – ಬೆಳಿಗ್ಗೆ ೯.೦೦ಕ್ಕೆ ಹೊರಟು, ೧೦.೦೫ಕ್ಕೆ ತಲುಪುತ್ತದೆ
ಕೆಂಪೇಗೌಡ ವಿಮಾನ ನಿಲ್ದಾಣದಿಂದ :
ಬೆಳಿಗ್ಗೆ ೬.೨೨ಕ್ಕೆ ಹೊರಟು, ೬.೫೦ಕ್ಕೆ ಯಲಹಂಕ ತಲುಪುತ್ತದೆ
ಬೆಳಿಗ್ಗೆ ೭.೪೫ಕ್ಕೆ ಹೊರಟು, ೮.೫೦ಕ್ಕೆ ಕಂಟೋನ್‌ಮೆಂಟ್
ಬೆಳಿಗ್ಗೆ ೮.೨೧ಕ್ಕೆ ಹೊರಟು, ೯.೨೫ಕ್ಕೆ ಯಶವಂತಪುರ
ಬೆಳಿಗ್ಗೆ ೬.೪೩ಕ್ಕೆ ಹೊರಟು, ೮.೨೦ಕ್ಕೆ ಮೆಜೆಸ್ಟಿಕ್
ಬೆಳಿಗ್ಗೆ ೧೦.೩೭ಕ್ಕೆ ಹೊರಟು, ೧೧.೫೫ಕ್ಕೆ ಮೆಜೆಸ್ಟಿಕ್ ತಲುಪುತ್ತದೆ
ಸಂಜೆ ಹೊರಡುವ ರೈಲುಗಳು:-
18:50 ಮೆಜೆಸ್ಟಿಕ್ – ಬಂಗಾರಪೇಟೆ
20:05 ಮೆಜೆಸ್ಟಿಕ್ – ದೇವನಹಳ್ಳಿ
ಬೆಳಗ್ಗೆ ಬರುವ ರೈಲುಗಳು:-
06:22 ದೇವನಹಳ್ಳಿ – ಯಲಹಂಕ
07:50 ದೇವನಹಳ್ಳಿ – ಬೆಂಗಳೂರು ದಂಡು
08:25 ಬಂಗಾರಪೇಟೆ – ಯಶವಂತಪುರ
ಸಂಜೆ ಬರುವ ರೈಲುಗಳು:-
18:42 ಬಂಗಾರಪೇಟೆ – ಮೆಜೆಸ್ಟಿಕ್
20:38 ದೇವನಹಳ್ಳಿ – ಮೆಜೆಸ್ಟಿಕ್
summary :
Finally, after years of waiting, one can board a train to the airport halt station from Monday. Interestingly, the ticket fares will not be more than Rs 15.
#Bengaluru #AirportRailwayStation