ಮೈಸೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ: ಸ್ಥಳಕ್ಕೆ ಕುಲಸಚಿವ ಶಿವಪ್ಪ ಭೇಟಿ…

ಮೈಸೂರು,ಜನವರಿ,6,2021(www.justkannada.in): ಮಾನಸ ಗಂಗೋತ್ರಿ ಪಿಜಿ ಹಾಸ್ಟೆಲ್ ಗಳಲ್ಲಿ ಸೂಕ್ತ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು ಮೈಸೂರು ವಿಶ್ವ ವಿದ್ಯಾನಿಲಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮೈಸೂರು ವಿವಿ ಕುವೆಂಪು ಪುತ್ಥಳಿ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಹಾಗೆಯೇ ಪ್ರತಿಭಟನಾ ಸ್ಥಳಕ್ಕೆ ವಿಸಿ ಆಗಮಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಹಾಸ್ಟೆಲ್ ನಲ್ಲಿ ಶುದ್ಧ ಕುಡಿಯುವ ನೀರು ಇಲ್ಲ. ಊಟದ ವ್ಯವಸ್ಥೆ ಕೂಡ ಸರಿಯಿಲ್ಲ. ಕೋವಿಡ್ ಸಂದರ್ಭದಲ್ಲಿ ಒಂದೇ ಕಡೆ ಎಲ್ಲಾ ವಿದ್ಯಾರ್ಥಿಗಳಿಗೆ ಊಟ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಊಟಕ್ಕಾಗಿ ಗುಂಪುಗುಂಪಾಗಿ ಸೇರಿ ಊಟ ಪಡಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಡುಗೆ ಕೋಣೆಯಲ್ಲಿ 500 ಜನ ಒಟ್ಟಿಗೆ ಊಟ ಮಾಡ್ತಾರೆ.

ಜತೆಗೆ ಸರಿಯಾದ ನ್ಯೂಸ್ ಪೇಪರ್ ಬರುತ್ತಿಲ್ಲ. ಸೆಂಟ್ರಲೈಜ್ ಕಿಚನ್ ವ್ಯವಸ್ಥೆ ನಮಗೆ ಬೇಡ. ನಮಗ ಶುದ್ಧ ಕುಡಿಯವ ನೀರು ಪೂರೈಕೆ ಆಗಬೇಕು. ಸೋಲರ್ ವ್ಯವಸ್ಥೆ ಮಾಡಬೇಕು. ಹಾಗೆಯೇ ಸೂಕ್ತ ಗ್ರಂಥಾಲಯ ವ್ಯವಸ್ಥೆ ಮಾಡುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.mysore-university-students-protest-register-shivappa-visit

ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕುಲಸಚಿವ ಶಿವಪ್ಪ ಬೇಟಿ.

ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಮೈಸೂರು ವಿವಿ ಕುಲಸಚಿವ ಶಿವಪ್ಪ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು ರಿಜಿಸ್ಟರ್ ಶಿವಪ್ಪರನ್ನು ಸುತ್ತುವರೆದು ಸಮಸ್ಯೆ ಶೀಘ್ರವೇ ಬಗೆಹರಿಸಲು ಪಟ್ಟು ಹಿಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ರಿಜಿಸ್ಟರ್ ಶಿವಪ್ಪ ಬಳಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ENGLISH SUMMARY…..

UoM students protest: Registrar Shivappa visits protestors
Mysuru, Jan. 06, 2021 (www.justkannada.in): Demanding proper infrastructure at the Manasa Gangotri PG hostel, the students of the University of Mysore today stated a demonstration.mysore-university-students-protest-register-shivappa-visit
The students gathered in front of the Kuvempu statue inside the University campus and demonstrated demanding proper facilities. They demanded the officials to come to the spot and listen to their woes. The protesting students alleged that the hostel lacks proper drinking water, food facility. They alleged that the food is being provided to all the students at the same hall even during Covid pandemic and there is no proper arrangement of maintaining social distance. All of them have to go together to have food. About 500 students are forced to have food in the dining hall. They also demanded to set right the solar heater facility and upgrade the library.
Shivappa, Registrar, University of Mysore, visited the spot and listened to their woes and promised to solve all their problems.
Keywords: University of Mysore/ Registrar/ students protest/ demands

Key words: Mysore university-Students –protest-Register -Shivappa -visit