ಚಿಕ್ಕಬಳ್ಳಾಪುರ,ಜನವರಿ,8,2021(www.justkannada.in): ನಾಳೆ ಕೇಂದ್ರದಿಂದ ರಾಜ್ಯಕ್ಕೆ ಕೊರೋನಾ ಲಸಿಕೆ ಬರಲಿದ್ದು ಸೋಮವಾರದಿಂದ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೊರೋನಾ ಲಸಿಕೆ ಹಂಚಿಕೆ ಕುರಿತು ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ಕೇಂದ್ರದಿಂದ ರಾಜ್ಯಕ್ಕೆ 13.90 ಲಕ್ಷ ಡೋಸ್ ಬರಲಿದ್ದು, ಸೋಮವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ರಾಜ್ಯ ಮತ್ತು ಕೇಂದ್ರದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಇಂದು ರಾಜ್ಯದಲ್ಲಿ 263 ಸ್ಥಳಗಳಲ್ಲಿ ಡ್ರೈರನ್ ಪ್ರಾರಂಭವಾಗಿದೆ. ಕ್ಲಿನಿಕಲ್ ಟ್ರಯಲ್ ಸೇರಿದಂತೆ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಲಾಗುತ್ತದೆ. ವಿಜ್ಞಾನಿಗಳು, ಸಂಶೋಧಕರು ಮೇಲೆ ನಂಬಿಕೆ ಇಡೋಣ ಎಂದರು.
ENGLSIH SUMMARY….
Corona vaccine to arrive in State tomorrow: Distribution to begin from Monday- Minister Sudhakar
Chikkaballapura, Jan. 08, 2021 (www.justkannada.in): “The much anticipated Corona vaccine will arrive in the State tomorrow from the Govt. of India, and the distribution will begin from Monday,” said Health and Medical Education Minister Dr. K. Sudhakar.
Speaking to the presspersons in Chikkaballapura today, he said about 13.90 lakh doses of the vaccine will arrive tomorrow, and it will be distributed to different districts of the State. “Corona is in control in the State as well as the country. A dry run is being done in 263 places across State. Including clinical trials, there will be three levels of examination of the vaccine. Let us all trust our scientists and researchers. I thank Prime Minister Narendra Modi for this,” he said.
Keywords: Minister Dr. K. Sudhakar/ Corona vaccine/ 13.90 lakh doses/ dry run
Key words: Corona vaccine – state- tomorrow-Delivery –Monday-Health Minister -Sudhakar.