“ಮಾರ್ಚ್-ಏಪ್ರಿಲ್ ನಲ್ಲಿ ಕೆ-ಸೆಟ್ ಪರೀಕ್ಷೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,08,2021(www.justkannada.in) : ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಕೆ-ಸೆಟ್ ಪರೀಕ್ಷೆ ನಡೆಸಲಾಗುವುದು. ಯುಜಿಸಿಯಿಂದ ಇನ್ನೂ ಎರಡು ವರ್ಷಗಳವರೆಗೆ ಕೆ-ಸೆಟ್ ಪರೀಕ್ಷೆ ನಡೆಸಲು ವಿವಿಗೆ ಅವಕಾಶ ನೀಡಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk-logo-justkannada-mysore

ಶುಕ್ರವಾರ ಕ್ರಾಫರ್ಡ್‌ ಭವನದ ಅಕಾಡೆಮಿಕ್‌ ಕೌನ್ಸಿಲ್‌ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಕುಲಪತಿಗಳು ಮಾಹಿತಿ ನೀಡಿದರು.

“ಕೆ-ಸೆಟ್ ಪರೀಕ್ಷೆ, ಮೈಸೂರು ಕೇಂದ್ರದಿಂದ ಹೆಚ್ಚು ಮಂದಿ ಅರ್ಹತೆ”

ಹನ್ನೊಂದು ಕೇಂದ್ರಗಳಲ್ಲಿ ನಡೆದ ಕೆಸೆಟ್ ಪರೀಕ್ಷೆಯಲ್ಲಿ ಮೈಸೂರು ಕೇಂದ್ರದಿಂದ ಹೆಚ್ಚು ಮಂದಿ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಮೈಸೂರು ಮೊದಲ ಸ್ಥಾನ ಪಡೆದುಕೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ .03% ಕಡಿಮೆಯಾಗಿದೆ ಎಂದರು.

ಮೈಸೂರು ಕೇಂದ್ರದಿಂದ 1248 ಮಂದಿ, ಬೆಂಗಳೂರು ಕೇಂದ್ರದಿಂದ 1133 ಮಂದಿ, ಬೆಳಗಾಂ ಕೇಂದ್ರದಿಂದ 200 ಮಂದಿ, ಬಳ್ಳಾರಿ ಕೇಂದ್ರದಿಂದ 332 ಮಂದಿ, ದಾವಣಗೆರೆ ಕೇಂದ್ರದಿಂದ 274 ಮಂದಿ, ಧಾರವಾಡ ಕೇಂದ್ರದಿಂದ 668 ಮಂದಿ, ಗುಬ್ಲರ್ಗಾ ಕೇಂದ್ರದಿಂದ 464 ಮಂದಿ, ಮಂಗಳೂರು ಕೇಂದ್ರದಿಂದ 391 ಮಂದಿ, ಶಿವಮೊಗ್ಗ ಕೇಂದ್ರದಿಂದ 296 ಮಂದಿ, ತುಮಕೂರು ಕೇಂದ್ರದಿಂದ 234 ಮಂದಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜನರಲ್-2663 ಮಂದಿ, SC-851 ಮಂದಿ , ST-172 ಮಂದಿ,  CAT-1-218 ಮಂದಿ, CAT-2A-852ಮಂದಿ, CAT-2B-223 ಮಂದಿ, CAT3A-235 ಮಂದಿ, B-308 ಮಂದಿ ಸೇರಿದಂತೆ ಒಟ್ಟು 5495 ಮಂದಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹರಾಗಿದ್ದಾರೆ ಎಂದು ಹೇಳಿದರು.

ವಾಣಿಜ್ಯಶಾಸ್ತ್ರ(ಕಾಮರ್ಸ್) ವಿಷಯವು ಪ್ರಥಮ ಸ್ಥಾನ

ಕೆಸೆಟ್ ಪರೀಕ್ಷೆ ನಡೆಸಲು ಯುಜಿಸಿಯಿಂದ ಮಾನ್ಯತೆ ಪಡೆದಿದ್ದು, 2020 ಸೆಪ್ಟೆಂಬರ್ 27ರಂದು 41 ವಿಷಯಗಳಿಗೆ ಕೆಸೆಟ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ವಾಣಿಜ್ಯಶಾಸ್ತ್ರ(ಕಾಮರ್ಸ್) ವಿಷಯವು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.kset-test-5,495-become-assistant-professor-Eligibility-Chancellor-Prof G.Hemant Kumar ...

ಸುದ್ದಿಗೋಷ್ಟಿಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷಾ ಕೇಂದ್ರದ ಸಂಯೋಜಕ ಪ್ರೊ.ಎಚ್.ರಾಜಶೇಖರ್ ಹಾಜರಿದ್ದರು.

ENGLISH SUMMARY…

KSET Exams in March-April
Mysuru, Jan. 08, 2021 (www.justkannada.in): University of Mysore Vice-Chancellor, Prof. G. Hemanth Kumar, today informed that the Karnataka State Eligibility Test for Professorship, University of Mysore, will be conducted in March-April. The UGC has allowed UoM to conduct KSET exams for the next two years.kset-test-5,495-become-assistant-professor-Eligibility-Chancellor-Prof G.Hemant Kumar ...
“Out of the eleven centres where KSET exams were held the highest number of candidates who have been selected are from Mysuru Centre. Mysuru has secured first place, but it is 03% lesser than last year,” he said.
The KSET exams were held on September 27, 2020, for 41 subjects and Commerce has emerged on the top.
Prof. R. Shivappa, Registrar, University of Mysore, Prof. H. Rajashekar, Karnataka State Eligibility Test for Professorship were present in the press meet.
Keywords: KSET/ University of Mysore/ March-April

key words : March-April-K-set-Examination-Chancellor-Prof.G.Hemant Kumar