ಹುಲಿ, ಕಾಡಾನೆ ದಾಳಿ ಭಯಕ್ಕೆ ಬೆಚ್ಚಿ ದೂರ ಉಳಿದಿದ್ದ ಮಕ್ಕಳೀಗ ಶಾಲೆಗೆ: ಗಿರಿಜನ ಆಶ್ರಮ ಶಾಲೆಗೆ ಬಂತು ಬಸ್ ಸೌಲಭ್ಯ…

ಮೈಸೂರು,ಜೂ, 25,2019(www.justkannada.in): ಹುಲಿ,ಕಾಡಾನೆಗಳ ದಾಳಿಯ ಭಯಕ್ಕೆ ಬೆಚ್ಚಿ ಶಾಲೆಗೆ ಬಾರದೆ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಗಿರಿಜನ ಹಾಡಿಯ ಮಕ್ಕಳಿಗೆ ಶಾಲೆಗೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ.

ಗಿರಿಜನ ಮಕ್ಕಳನ್ನು ಗಿರಿಜನ ಆಶ್ರಮ ಶಾಲೆಗೆ ಕರೆತರಲು ಕೊಡುಗೆಯಾಗಿ ನೀಡಿದ್ದ ವಾಹನಕ್ಕೆ ಸಚಿವ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಚಾಲನೆ  ನೀಡಿದರು.

ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಹಾಡಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಒದಗಿಸಿದ ಬಸ್ ವ್ಯವಸ್ಥೆಯಿಂದಾಗಿ ಹತ್ತಾರು ಮಕ್ಕಳು ಶಾಲೆಗೆ ಬಂದು ಹೋಗುತ್ತಿರುವುದರಿಂದ ಹಾಜರಾತಿ ಪ್ರಮಾಣ ತುಸು ಏರಿಕೆಯಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಮೊಟ್ಟ ಮೊದಲ ಬಾರಿಗೆ ಮಾಡಿದ ಈ ವಿನೂತನ ಪ್ರಯೋಗ ಸಫಲವಾಗಿದ್ದು, ಸಿಎಸ್ಆರ್ ಯೋಜನೆಯಡಿ ಇತರ ಆಶ್ರಮಶಾಲೆಗೂ ಬಸ್ ಸೌಲಭ್ಯ ಒದಗಿಸಲು ಚಿಂತನೆ ಮಾಡಲಾಗಿದೆ.

ಹುಲಿ,ಆನೆ,ಚಿರತೆ ಸೇರಿದಂತೆ ಅಪಾರ ವನ್ಯಜೀವಿಗಳನ್ನು ಹೊಂದಿರುವ ನಾಗರಹೊಳೆ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗಡಿಪ್ರದೇಶ ಎಚ್.ಡಿ.ಕೋಟೆಯ ಅನೇಕ ಹಾಡಿಗಳಲ್ಲಿ ಗಿರಿಜನರು ವಾಸ ಮಾಡುತ್ತಿದ್ದಾರೆ. ಕೆಲವರು ಕಾಡಿನ ಹೊರಗೆ ವಾಸಿಸಿದರೆ,ಕೆಲವರು ತಮ್ಮ ಹಾಡಿಗಳಲ್ಲೇ ಇರುವ ಕಾರಣಕ್ಕಾಗಿ ಸರಕಾರ ಗಿರಿಜನ ಆಶ್ರಮ ಶಾಲೆಯನ್ನು ತೆರೆದಿತ್ತು. ಈಶಾಲೆಗೆ ಕೇರಳ ರಾಜ್ಯ ಗಡಿಭಾಗದ ಹಾಡಿಗಳಾದ ಆನೆಮಾಳ,ಮಾಳದ ಹಾಡಿ, ಮೂನಿಮೂಲೆ,ಡಿ.ಬಿ.ಕುಪ್ಪೆ, ಬಳ್ಳೇಹಾಡಿ, ಗೋಳೂರು, ವಡಕನಮಾಳ, ಬಾವಲಿ, ಮಚ್ಚೂರು ಹಾಡಿಗಳಲ್ಲಿ ಆದಿವಾಸಿ ಮಕ್ಕಳು 1ರಿಂದ ಏಳನೇ ತರಗತಿಯ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದರು. ಆದರೆ, ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಡು ಪ್ರಾಣಿಗಳ ಹಾವಳಿ ಜತೆಗೆ ಆಗಿಂದಾಗ್ಗೆ ಹುಲಿ ದಾಳಿ ಮಾಡುತ್ತಿದ್ದರಿಂದ ಶಾಲೆಗೆ ಬರಲು ಭಯಭೀತರಾಗಿದ್ದರು. ಅದರಲ್ಲೂ ಒಂದರಿಂದ ಎರಡನೇ ತರಗತಿ ಮಕ್ಕಳು ಶಾಲೆಯಲ್ಲಿ ಉಳಿಸಲು ಇಚ್ಛಿಸದ ಕಾರಣ ದಿನನಿತ್ಯ ಮನೆಯಿಂದ ಬಂದು ಹೋಗುತ್ತಿದ್ದರು. ಒಂದು ದಿನ ಶಾಲೆಗೆ ಬಂದರೆ, ಎರಡು-ಮೂರು ದಿನ ಮನೆಯಲ್ಲೇ ಉಳಿದುಬಿಡುತ್ತಿದ್ದರು. ಇದರಿಂದ ಆಶ್ರಮಶಾಲೆಗಳ ಶಿಕ್ಷಕರುಮಕ್ಕಳಿಲ್ಲದೆ ಕಾದು ಕೂತರೆ, ಪೋಷಕರು ಕೂಲಿ ಕೆಲಸಕ್ಕೂ ಹೋಗದೆ ಮಕ್ಕಳನ್ನು ಕಾಯುತ್ತಾ ಕೂರುತ್ತಿದ್ದರು. ಅಧಿಕಾರಿಗಳು,ಶಿಕ್ಷಕರು ಗಿರಿಜನರಿಗೆ ಹೋಗಿ ಶಾಲೆಗೆ ಕಳುಹಿಸಿ ಅಂದರೆ ಮಕ್ಕಳು ಹೆದರಿಕೊಂಡು ಬರದೆ ಉಳಿಯುತ್ತಿದ್ದರು. ಇದನ್ನು ಮನಗಂಡ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಬಿ.ಎಸ್.ಪ್ರಭಾ ಅವರು ಮಕ್ಕಳನ್ನು ಶಾಲೆಗೆ ಕರೆತರುವಂತೆ ಮಾಡಲು ಏನಾದರೂ ಒಂದು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಮಾಡಿದ ಆಲೋಚನೆಯೇ ಬಸ್ ಸೌಲಭ್ಯ ಕಲ್ಪಿಸುವ ಐಡಿಯಾ ಬರಲು ಕಾರಣವಾಗಿದೆ. ತಕ್ಷಣವೇ ಎಚ್ಡಿಎಫ್ಸಿನ ಅಧಿಕಾರಿಗಳನ್ನು ಸಂಪಕರ್ಿಸಿ ಸಿಎಸ್ಆರ್ ಯೋಜನೆಯಡಿ ಶಾಲಾ ವಾಹನ ಒದಗಿಸುವಂತೆ ಪ್ರಸ್ತಾಪ ಇಟ್ಟಿದ್ದರು. ಈ ಪ್ರಸ್ತಾಪವನ್ನು ಒಪ್ಪಿಕೊಂಡ ಎಚ್ಡಿಎಫ್ಸಿ ಬ್ಯಾಂಕ್ನವರು ಈಗ ಸಿಎಸ್ಆರ್ ಯೋಜನೆಯಡಿ ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ 21 ಸೀಟುಗಳ ಶಾಲಾ ವಾಹನವನ್ನು ಇಲಾಖೆಗೆ ಕೊಡುಗೆಯಾಗಿ ನೀಡಿದೆ.

ಮಕ್ಕಳಿಗೆ ಅನುಕೂಲ: ಹುಲಿದಾಳಿ ಸೇರಿ ಇನ್ನಿತರ ಭಯಕ್ಕೆ ದೂರ ಉಳಿದಿದ್ದ ಮಕ್ಕಳನ್ನು ಶಾಲೆಗೆ ಕರೆತರಲು,ಪ್ರಾಣಿಗಳ ಹಾವಳಿಯ ಆತಂಕವನ್ನು ದೂರಗೊಳಿಸಿ ಮಾಣಸಿಕ ಸ್ಥೈರ್ಯ ತುಂಬಲು ಸಹಕಾರಿಯಾಗಲಿದೆ. ಆಶ್ರಮ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಿಸುವ ಜತೆಗೆ ಶಾಲೆಗೆ ಗೈರು ಹಾಜರಾಗುವುದನ್ನು ತಪ್ಪಿಸುವ ಮೂಲಕ ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡಲು ಈ ಬಸ್ ವ್ಯವಸ್ಥೆ ಸಾಕಷ್ಟು ಪ್ರಯೋಜನಕ್ಕೆ ಬರಲಿದೆ ಎನ್ನುವುದು ಅಧಿಕಾರಿಗಳ ವಿಶ್ವಾಸವಾಗಿದೆ.

ಮತ್ತಷ್ಟು ಶಾಲೆಗೂ ಚಿಂತನೆ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಹತ್ತು ಗಿರಿಜನ ಆಶ್ರಮ ಶಾಲೆ ಇದ್ದು,ಡಿ.ಬಿ.ಕುಪ್ಪೆಗಿರಿಜನ ಆಶ್ರಮ ಶಾಲೆಗೆ ಬಸ್ ಒದಗಿಸಿದ ಮಾದರಿಯಲ್ಲೇ ಇತರ ಶಾಲೆಗೂ ವಿಸ್ತರಿಸುವ ಚಿಂತನೆ ನಡೆದಿದೆ. ಸಿಎಸ್ಆರ್ ಯೋಜನೆಯಡಿ ಕೊಡುವ ಗಣ್ಯರು,ಕಾರ್ಪೋರೇಟ್ ಕಂಪನಿಗಳ ಮುಖ್ಯಸ್ಥರೊಂದಿಗೆ ಪತ್ರವ್ಯವಹಾರ ಮಾಡಿ ಬಸ್ ಸೌಲಭ್ಯ ಒದಗಿಸಲು ಇಲಾಖೆ ಕಾರ್ಯೋನ್ಮುಖವಾಗಿದೆ. ಜಕ್ಕಹಳ್ಳಿ,ಬಸವನಗಿರಿ, ಭೀಮನಹಳ್ಳಿ, ಕಬ್ಬೇಪುರ, ಬಿ.ಮಟಕೆರೆ,ಮೇಟಿಕುಪ್ಪೆ, ಉದ್ಬೂರು, ಪೆಂಜಹಳ್ಳಿ,ಚನ್ನಗುಂಡಿಯ ಗಿರಿಜನ ಆಶ್ರಮಶಾಲೆಗೆ ಒದಗಿಸಿದರೆ ಮಕ್ಕಳನ್ನು ಕರೆತಂದು ಹಾಜರಾತಿ ಹೆಚ್ಚಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ.

ಮೂಲಸೌಕರ್ಯ ಹೊಂದಿದ ಶಾಲೆ: ಡಿ.ಬಿ.ಕುಪ್ಪೆ ಆಶ್ರಮಶಾಲೆಯು ಎಲ್ಲ ತರಹದ ಮೂಲ ಸೌಕರ್ಯ ಹೊಂದಿದ್ದು, ಗ್ರಂಥಾಲಯ ಅಲ್ಲದೆ 15 ಕಂಪ್ಯೂಟರ್ ಇರುವ ಇರುವ ಲ್ಯಾಬ್ಹೊಂದಿದೆ. ಮಕ್ಕಳಿಗಾಗಿ ಆಟಿಕೆ ವಸ್ತುಗಳು ಇದ್ದು, ಇದರಿಂದಾಗಿ ಒಂದು,ಎರಡನೇ ತರಗತಿಗಳು ಕಾಡುಪ್ರಾಣಿಗಳ ಭಯ ಬಿಟ್ಟು ಬಂದು ಹೋಗಲು ಶುರು ಮಾಡಿದ್ದಾರೆ ಎಂದು ಯೋಜನಾ ಸಮನ್ವಯಾಧಿಕಾರಿ ಬಿ.ಎಸ್.ಪ್ರಭಾ ಹೇಳಿದರು.

Key words: mysore- Bus Facility-tribal -ashram -school