ಬೆಂಗಳೂರು, ಜನವರಿ 12, 2021 (www.justkannada.in news ) ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಬರಲಿವೆ. ಇದನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಗಿ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗಲಿದೆ ಎಂದರು.
ಪ್ರತಿ ಡೋಸ್ ನಲ್ಲಿ 0.5 ಎಂಎಲ್ ಪ್ರಮಾಣವಿರುತ್ತದೆ. ಒಂದು ವೈಲ್ ನಲ್ಲಿ 10 ಮಂದಿಗೆ ಲಸಿಕೆ ನೀಡಬಹುದು. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಎಂದರು.
ಇದು ಮಾರಾಟಕ್ಕಲ್ಲ ಎಂದು ಲಸಿಕೆಯ ವೈಲ್ ನಲ್ಲಿ ಬರೆಯಲಾಗಿದೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೊನಾ ನಿಯಂತ್ರಣ ಮಾಡುವ ಅಧಿಕಾರಿ, ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮಾರ್ಗಸೂಚಿ ಪ್ರಕಾರ ನಡೆಯಲಿದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ ಎಂದರು
KEY WORDS : Karnataka- get 7.95 Vials- first consignment- safe vaccine- Health & Medical Education Minister Dr.K.Sudhakar
ENGLISH SUMMARY :
Karnataka to get 7.95 Vials in the first consignment, Government is providing safe vaccine : Health & Medical Education Minister Dr.K.Sudhakar
Bengaluru, January 12, 2021: State will be getting 7.95 vials of Covid vaccine in the first consignment and it will be stored in the government storage facility near Anand Rao circle. Said Health & Medical Education Minister Dr.K.Sudhakar. He was speaking to the media here on Tuesday.
Covi-Shield vaccine has already been approved by the DCGI (Drugs Control general of India). Union government has purchased 1.1 crore dosages of vaccine at a cost of Rs 210 per dose. This is the cheapest vaccine in the world. Said Dr.Sudhakar. Serum institute Pune is supplying vaccine at a cost of 231 crore. Karnataka will get 7.95 lakh vials of Covi-Shield in the first phase, said the Minister.
Each dose of vaccine contains 0.5 ml and each vial contains 10 dosages of vaccines. Second dose should be given 28 days after the first dosage. Vaccine will generate resistance power in the body and it is safe. Said Dr.Sudhakar
‘Not for sale’ is being written over the vial to avoid misuse. Health warriors will get the vaccine on priority. All guidelines will be followed while giving the vaccine. Every person who is vaccinated will be kept under observation for 30 minutes after vaccination, said the Minister.