ನವದೆಹಲಿ,ಜನವರಿ,13,2021(www.justkannada.in): ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರೈತರ ಹೋರಾಟ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ರೈತ ವಿರೋಧಿ ಮೂರು ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವುದಕ್ಕೆ ಪಟ್ಟು ಹಿಡಿದಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಇದರ ಭಾಗವಾಗಿ ಬುಧವಾರ ಬೆಳಗ್ಗೆಯಿಂದಲೇ ರೈತರ ರಕ್ತವನ್ನು ಸಂಗ್ರಹಿಸಿ ಆ ರಕ್ತ ಬಳಸಿ ಸಹಿ ಸಂಗ್ರಹಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸಚಿವರಿಗೆ ಹಾಗೂ ಸುಪ್ರಿಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ 21 ಪ್ರಶ್ನೆಗಳಿರುವ ಪತ್ರಗಳನ್ನು ಬರೆಯುತ್ತಿದ್ದಾರೆ.
`ನಿಮ್ಮ ನಿರ್ಧಾರ ಕೇಂದ್ರದ ಪರವಾಗಿದ್ದೀಯ? ಅಥವಾ ರೈತರ ಪರವೇ? ನೀವು ಕೇಂದ್ರದ ಪಾರ್ಟಿ. ಹಾಗಾಗೀ ನೀವು ಕಾನೂನುಗಳನ್ನು ರದ್ದುಗೊಳಿಸಿಲ್ಲ.’ ಎಂದು ಪತ್ರದಲ್ಲಿ ಬರೆಯುತ್ತಿದ್ದಾರೆ.
ಪಂಜಾಬ್ ನ ಲೂದಿಯಾನಾದವರಾದ ರೈತ ಮುಖಂಡ ತರಣ್ ಜಿತ್ ಸಿಂಗ್ ನಿಮಣಾ ಅವರು ಈ ಪತ್ರ ಚಳವಳಿಯ ನೇತೃತ್ವ ವಹಿಸಿದ್ದಾರೆ.
Key words: farmer-struggle – aggravated- Letter – blood- Union Minister