ಮೈಸೂರು,ಜನವರಿ,14,2021(www.justkannada.in) : ಮೈಸೂರಿನ ಪ್ರತಿಷ್ಠಿತ ಸಂಸ್ಥೆ CFTRI (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನ ಸಂಸ್ಥೆ)ಗೆ 70 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕವಾಗಿದ್ದಾರೆ.
ಮೂಲತಃ ಆಂಧ್ರ ಪ್ರದೇಶದ ಡಾ.ಶ್ರೀದೇವಿ ಅವರ ಪೋಷಕರು ದಶಕಗಳ ಹಿಂದೆಯೇ ಉದ್ಯೋಗದ ನಿಮಿತ್ತ ಮೈಸೂರಿಗೆ ಬಂದು ನೆಲೆಸಿದ್ದರು.
ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ್ದಾರೆ. ಜತೆಗೆ ಫುಡ್ ಸೈನ್ಸ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಿಎಫ್ ಟಿ ಆರ್ ಐ ನಲ್ಲೇ ೧೯೮೮ ರಲ್ಲಿ ಪೂರೈಸಿದ್ದರು ಎಂಬುದು ವಿಶೇಷ.
CFTRI ನಲ್ಲೇ ವ್ಯಾಸಂಗ ಮಾಡಿ, ಅಲ್ಲೇ ಕೆಲಸಕ್ಕೆ ಸೇರಿ ಇದೀಗ ಅದೇ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
key words : CFTRI-first time-female-director-Dr.Sridevi Annapurna Singh-Appoint