ಬೆಂಗಳೂರು,ಜನವರಿ,18,2021(www.justkannada.in) : ಉದ್ದವ್ ಠಾಕ್ರೆ ಅವರ ಹೇಳಿಕೆ ರಾಜಕೀಯ ಪ್ರೇರಿತ. ಇದೊಂದು ಅವಿವೇಕತನದ ಹೇಳಿಕೆ. ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿಗಳು ಬಂದು ಹೇಳಿದರೂ ಬೆಳಗಾವಿ, ನಿಪ್ಪಾಣಿ ಕರ್ನಾಟದಲ್ಲೇ ಇರುತ್ತದೆ ಎಂದರು.
ರೇಣುಕಾಚಾರ್ಯ ಅವರ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂಬ ಹೇಳಿಕೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಕೇಳುವುದನ್ನು ಪಕ್ಷದ ಚೌಕಟ್ಟಿನಲ್ಲಿ ಕೇಳಲಿ. ರಾಜ್ಯಾಧ್ಯಕ್ಷರ ಮೂಲಕ ಅಭಿಪ್ರಾಯಗಳು ಬರಲಿ ಎಂದು ತಿಳಿಸಿದ್ದಾರೆ.
key words : Stupid-statement-Against-uddav Thackeray-DCM Laxman Savadi