ಬೆಂಗಳೂರು,ಜನವರಿ,18,2021(www.justkannada.in): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ , ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಲು ಹೋದ್ರೆ ರಾಜ್ಯದಲ್ಲಿ ರಕ್ತಕ್ರಾಂತಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಉದ್ಧವ್ ಠಾಕ್ರೆ ಒಬ್ಬ ಹುಚ್ಛ. ಸಿಎಂಗೆ ಶಕ್ತಿ, ಪ್ರೀತಿ, ಬದ್ಧತೆ ಇಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಲು ಹೋದ್ರೆ ರಾಜ್ಯದಲ್ಲಿ ರಕ್ತಕ್ರಾಂತಿ ನಡೆಯಲಿದೆ ನಾಳೆ ಬೆಳಗ್ಗೆ 11.30 ಕ್ಕ ಮುಂದಿನ ಹೋರಾಟದ ಬಗ್ಗೆ ಸಭೆ ಸೇರಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧವೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
english summary…
Bloodshed if Maharashtra tries to include Belagavi in Mahrashtra: Watal Nagaraj warns
Bengaluru, Jan. 18, 2021 (www.justkannada.in): Kannada activist Watal Nagaraj has expressed his ire upon Maharashtra Chief Minister Uddhav Thackeray on his controversial statement of including Marathi speaking parts of Belagavi to Maharashtra state.
Condemning the Maharashtra CMs statement Watal Nagaraj said if Maharashtra makes any such attempt it will have to witness bloodshed.
Several pro-Kannada organisations are demonstrating against the Maharasthra CM for his controversial statement, during which Watal Nagaraj spoke to the media persons. “Uddhav Thackeray is a fool. If he makes any such attempt there will be bloodshed here. We will conduct a meeting tomorrow at 11.30 am and decide on our next step,” he said.
Kewyords: Watal Nagaraj/ Maharashtra CM Uddhav Thackeray/ controversial statement/ Belagavi/
Key words: Belgaum –maharastra-blood -state vatal Nagaraj warns.