ಮಂಡ್ಯ,ಜನವರಿ,18,2021(www.justkannada.in): ಜವಾನರ (ಹೊರಗುತ್ತಿಗೆ) ಹುದ್ದೆಗೆ ಶಿಫಾರಸ್ಸಿನ ಆರ್ಡರ್ ಕಾಫಿಕೊಡಲು 25 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಚೇರಿ ಅಧೀಕ್ಷಕರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯ ಎಂಬುವವರೇ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರು, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು. ಮಂಡ್ಯ ಜಿಲ್ಲೆ ಕಛೇರಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಜವಾನರ (ಹೊರಗುತ್ತಿಗೆ) ಹುದ್ದೆಗೆ ಶಿಫಾರಸ್ಸಿನ ಆರ್ಡರ್ ಕಾಪಿ ಕೊಡಲು ಮಹದೇವಯ್ಯ ಎಂಬುವವರ ಬಳಿ 25,000/-ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿಗೆ ದೂರು ನೀಡಲಾಗಿತ್ತು.
ಈ ಸಂಬಂಧ ರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲೇ ಮಹದೇವಯ್ಯ ಅವರಿಂದ 25,000/- ರೂ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ, ದಕ್ಷಿಣ ವಲಯ, ಮೈಸೂರಿನ ಪೊಲೀಸ್ ಅಧೀಕ್ಷಕರಾದ ಡಾ 1 ಸುಮನ್.ಡಿ.ಪಿ, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಉಪಾಧೀಕ್ಷರಾದ ಹೆಚ್. ಪರಶುರಾಮಪ್ಪ, ಪೊಲೀಸ್ ನಿರೀಕ್ಷಕ ರಾದ ಸತೀಶ್, ಜಿ.ಜೆ ಹಾಗೂ ಪೊಲೀಸ್ ಸಿಬ್ಬಂದಿಗಳು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ವಿಜಯ ಅವರನ್ನ ದಸ್ತಗಿರಿ ಮಾಡಿ, ಲಂಚದ ಟ್ರಾಪ್ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.
Key words: ACB -trapped -female officer- while- accepting bribes – office.