ಮೈಸೂರು,ಜನವರಿ,19,2021(www.justkannada.in): ಜಿಲ್ಲಾ ಉಸ್ತುವಾರಿ ಸಚಿವರ ಕುಂದುಕೊರತೆ ಸಂವಾದ ಕಾರ್ಯಕ್ರಮದಲ್ಲಿ ಫ್ಲೆಕ್ಸ್ ನಲ್ಲಿ ಫೊಟೊ ಹಾಕದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ವೇದಿಕೆ ಮೇಲೇರದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮೈಸೂರಿನಲ್ಲಿ ನಡೆಯಿತು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವ ವಿಜಯನಗರ ನಾಲ್ಕನೇ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕುಂದುಕೊರತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಫ್ಲೆಕ್ಸ್ ನಲ್ಲಿ ಫೋಟೊ ಹಾಕದಿದ್ದಕ್ಕೆ ಶಾಸಕ ಜಿಟಿ ದೇವೇಗೌಡರು ಅಸಮಾಧಾನಗೊಂಡು ವೇದಿಕೆ ಮೇಲೇರದೆ ಪ್ರತಿಭಟನೆ ನಡೆಸಿದರು.
ನಾನು ಕುಂದುಕೊರತೆ ಹೇಳಿಕೊಳ್ಳಲು ಬಂದಿದ್ದೇನೆ. ಇಲ್ಲಿ ಕುಂದುಕೊರತೆ ಕೇಳಲು ಬಂದಿಲ್ಲ. ನಾನು ಯಾಕೆ ವೇದಿಕೆ ಮೇಲೆ ಬರಲಿ. ಹಿಂದೆ ಪ್ಲೆಕ್ಸ್ ನೋಡಿ, ನನ್ನ ಪೋಟೊ ಇಲ್ಲ. ನಾನೇಕೆ ಮೇಲೆ ಬರಲಿ ಎಂದು ಶಾಸಕ ಜಿ.ಟಿ ದೇವೇಗೌಡರು ಕಿಡಿಕಾರಿದರು.
ಕೊನೆಗೆ ಸಚಿವ ಎಸ್.ಟಿ ಸೋಮಶೇಖರ್ ಅವರು ಶಾಸಕ ಜಿ.ಟಿ ದೇವೇಗೌಡರನ್ನ ಮನೊವೊಲಿಸಿ ವೇದಿಕೆ ಮೇಲೆ ಕೂರಿಸಿದರು.
ಭಾವಚಿತ್ರ ಹಾಕಿಲ್ಲದ್ದಕ್ಕೆ ಶಾಸಕ ಜಿಟಿಡಿ ಬಳಿ ಕ್ಷಮೆ ಕೋರಿದ ರಾಜೀವ್...
ಫ್ಲೆಕ್ಸ್ ನಲ್ಲಿ ಶಾಸಕ ಜಿಟಿ ದೇವೇಗೌಡ ಭಾವಚಿತ್ರ ಹಾಕಿಲ್ಲದ್ದಕ್ಕೆ ಮುಡಾ ಅಧ್ಯಕ್ಷ ರಾಜೀವ್ ಕ್ಷಮೆ ಕೋರಿದರು. ನೆನ್ನೆ ರಾತ್ರಿ ಫ್ಲೆಕ್ಸ್ ಅಳವಡಿಸುವ ವೇಳೆ ಕೈತಪ್ಪಿ ಹೋಗಿದೆ. ಈ ಹಿನ್ನೆಲೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಹಿರಂಗವಾಗಿ ವೇದಿಕೆಯಲ್ಲಿ ಶಾಸಕ ಜಿ.ಟಿ ದೇವೇಗೌಡರಿಗೆ ಕ್ಷಮೆ ಕೋರಿದರು. ಕ್ಷಮೆಯಾಚಿಸಿ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸುವಂತೆ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಮನವಿ ಮಾಡಿದರು.
Key words: MLA- GT Deve Gowda -upset – Flex -not photo-mysore