ಮೈಸೂರು,ಜನವರಿ,19,2021(www.justkannada.in): ರಾಜ್ಯ ಕೃಷಿ ಇಲಾಖೆ ಮತ್ತು ಕೆಪಕ್ ಹಾಗೂ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ವತಿಯಿಂದ ಆಯೋಜಿಸಲಾದ ‘ಪಿಎಂ ಎಫ್ಎಂಇ’ ಯೋಜನೆಯಡಿ ರೈತರಿಗೆ ಆಹಾರ ಸಂಸ್ಕರಣಾ ತರಬೇತಿ ಶಿಬಿರವನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಉದ್ಘಾಟಿಸಿದರು.
ಸಿಎಫ್ ಟಿಆರ್ ಐನ ಐಎಫ್ಟಿಟಿಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಸಚಿವ ಬಿ.ಸಿ ಪಾಟೀಲ್ ಸೇರಿ ಗಣ್ಯರು ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಒತ್ತು ನೀಡಲು ರೈತರಿಗೆ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಒಂದು ಜಿಲ್ಲೆ ಒಂದು ಉತ್ಪನ್ನ ಧ್ಯೇಯಯೊಂದಿಗೆ ‘ಪಿಎಂ ಎಫ್ಎಂಇ’ ಯೋಜನೆಯಡಿ ಕಾರ್ಯಕ್ರಮ ಜಾರಿ ಮಾಡಲಾಗುತ್ತದೆ.
ತರಬೇತಿ ಶಿಬಿರದಲ್ಲಿ 18 ಜಿಲ್ಲೆಯ 500ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಿಎಸ್ಆರ್ – ಸಿಎಫ್ ಟಿಆರ್ ಐ ನೂತನ ನಿರ್ದೇಶಕಿ ಡಾ. ಶ್ರೀದೇವಿ ಎ. ಸಿಂಗ್, ಕೆಪೆಕ್ ಅಧ್ಯಕ್ಷ ಎಸ್.ಐ. ಚಿಕ್ಕನಗೌಡರ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವರಾಜು, ಡಿಜಿ-ಸಿಎಸ್ಐಆರ್ ಮತ್ತು ಕಾರ್ಯದರ್ಶಿ ಡಾ. ಶೇಖರ್ ಸಿ.ಮಂದೆ, ವಿಜ್ಞಾನಿ ಹಾಗೂ ನೋಡಲ್ ಆಫೀಸರ್ ಡಾ. ಉಮೇಶ್ ಹೆಬ್ಬಾರ್ ಸೇರಿದಂತೆ ಸಿಎಫ್ ಟಿಆರ್ ಐ ನ ವಿಜ್ಞಾನಿಗಳು ಭಾಗಿಯಾಗಿದ್ದರು.
Key words: Food Processing -Training Camp – Farmers – PMFME Project-Inaugurated -Minister -BC Patil …