ಮೈಸೂರು,ಜನವರಿ,19,2021(www.justkannada.in) : ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿಪಡಿಸಬೇಕು. ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ಮಾಡಿದಲ್ಲಿ ರೈತರ ಆದಾಯ ಖಂಡಿತವಾಗಿಯೂ ದ್ವಿಗುಣಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.
ಮೈಸೂರಿನ ಸಿಎಫ್ ಟಿಆರ್ ಐ ಸಭಾಂಗಣದಲ್ಲಿ ನಡೆದ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರೈತರು ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ರೂಪಿಸಬೇಕು. ಆಹಾರ ಉತ್ಪನ್ನಗಳ ಸಂಸ್ಕರಣೆಯ ಜೊತೆಗೆ ಮಾರ್ಕೇಟಿಂಗ್ ಕೂಡ ಜ್ಞಾನ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕೃಷಿ ಉದ್ಯಮ ರೈತೋದ್ಯಮವಾಗಬೇಕು. ರೈತನು ಕೃಷಿ ಉದ್ಯಮಿಯಾಗಬೇಕು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಕೃಷಿ ಚಟುವಟಿಕೆಗಳನ್ನು ಅರಿಯಲು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಉತ್ಪಾದನೆಯ ಜೊತೆಗೆ ಉತ್ಪನ್ನಗಳ ಸಂಸ್ಕರಣೆ, ಅವುಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಹುಮುಖ್ಯವೆಂಬುದು ಅರಿವಾಗಿದೆ ಎಂದು ಹೇಳಿದರು.
ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ಅವರನ್ನು ಲಾಭದಾಯಕ ಕೃಷಿಯತ್ತ ನಡೆಸಲು ಸಿಎಫ್ ಟಿಆರ್ ಐ ಜೊತೆ ಸಭೆ ನಡೆಸಿ ರೈತರಿಗೆ ತರಬೇತಿ ನೀಡಲು ತೀರ್ಮಾನಿಸಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಹಣ್ಣು ತರಕಾರಿಗಳು, ತೋಟಗಾರಿಕಾ, ಸಾಂಬಾರು, ಸಿರಿಧಾನ್ಯಗಳು, ಎಣ್ಣೆಕಾಳು, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ರೈತ ಉತ್ಪನ್ನ ಬೆಳೆಗಳ ಸಂಸ್ಕರಣೆ ಮಾರುಕಟ್ಟೆಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತರಬೇತಿ ಪಡೆದ ರೈತರಿಗೆ ಪಿಎಂಎಫ್ ಎಂಇ ಯೋಜನೆಯಡಿ ಆಯ್ಕೆಯಾದ ಜಿಲ್ಲೆಯ ಉತ್ಪನ್ನಕ್ಕೆ ಚಿಕ್ಕ ಉದ್ದಿಮೆ ಪ್ರಾರಂಭಿಸಲು ಶೇ.35 ರಷ್ಟು ಸಹಾಯಧನವನ್ನು ಗರಿಷ್ಠ 10 ಲಕ್ಷ ರೂ.ಗಳವರೆಗೆ ನೀಡಲಾಗುವುದು. ಅಲ್ಲದೇ ಯೋಜನೆಯ ವಿವರವನ್ನು ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಅನುದಾನ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದರು.
ಈಗಾಗಲೇ ಕೃಷಿ ಇಲಾಖೆಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ 2020-21 ನೇ ಸಾಲಿನಲ್ಲಿ ಸುಮಾರು 45 ಕೋ.ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ತರಬೇತಿಯ ಸದುಪಯೋಗಪಡಿಸಿಕೊಂಡು ಕೃಷಿಯು ಉದ್ದಿಮೆಯಾಗಬೇಕು ರೈತ ರೈತೋದ್ಯಮಿಯಾಗಬೇಕು ಎಂದು ತಿಳಿಸಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಫ್ ಟಿಆರ್ ಐ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್, ವಿಜ್ಞಾನಿಗಳಾದ ಡಾ:ಮಣಿಲಾಲ್, ಡಾ.ಉಮೇಶ್ ಹೆಬ್ಬಾರ್ ಇತರರು ಉಪಸ್ಥಿತರಿದ್ದರು.
ENGLISH SUMMARY…..
‘Farmers should be able to fix the price of their produce by themselves’: Agriculture Minister B.C. Patil
Mysuru, Jan. 19, 2021 (www.justkannada.in): Agriculture Minister B.C. Patil today said that a farmer should be able to fix the price by himself for the crop that he has grown. Farmers’ income will definitely double if he brands the produce by himself.
He inaugurated the ‘One District One Product’ (crop) training program organized at the CFTRI auditorium in Mysuru today. In his address, he said that the Govt. of India has organized training programs with the objective of making the farmers gain knowledge in marketing as well as processing of food products, and in view of increasing the micro food processing units in the unorganized sector and its competitiveness.
“With a view of providing an advantage to the farmers and make sure that they involve in profitable agriculture, the Government has held talks with the CFTRI and decided to train the farmers, and thus training is being given in processing and marketing of various agricultural products such as fruits, vegetables, horticultural crop, spices, millets, oilseeds, bakery products, etc.,” he added.
He also informed that a 35% subsidy up to a maximum of Rs.10 lakh will be given to farmers who get the training, to start a small enterprise for the selected product of the district, under PMFME scheme.
CFTRI Director Dr. Sridevi Singh, scientists Dr. Manilal, Dr. Umesh Hebbar, and others were present in the inaugural program.
Keywords: CFTRI/ Agriculture Minister B.C. Patil/ PMFME/ farmers training
key words : Farmers-harvest-their-crops-own-brand–done-Income-double-Minister-B.C.Patil