ಭಗವ ಧ್ವಜ ಹಿಡಿದು ಬೆಳಗಾವಿ ಗಡಿ ಪ್ರವೇಶಕ್ಕೆ ಶೀವಸೇನೆ ಪುಂಡರಿಂದ ಯತ್ನ: ಪೊಲೀಸರಿಂದ ತಡೆ….

ಬೆಳಗಾವಿ,ಜನವರಿ,21,2021(www.justkannada.in):  ಬೆಳಗಾವಿ ಗಡಿ ಪ್ರದೇಶದಲ್ಲಿ ಶಿವಸೇನೆ ಪುಂಡರು ಮತ್ತೆ ತನ್ನ ಪುಂಡಾಟಿಕೆ ಮೆರೆದಿದ್ದು, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಭಗವ ಧ್ವಜ ಹಿಡಿದು ಬೆಳಗಾವಿ ಗಡಿ ಪ್ರವೇಶಕ್ಕೆ ಯತ್ನಿಸಿದ್ದಾರೆ.jk

ಕೊಲ್ಲಾಪುರದಿಂದ ಬಂದಿರುವ ಶಿವಸೇನೆ ಕಾರ್ಯಕರ್ತರು ಇದೀಗ ಮತ್ತೆ ತಮ್ಮ ಪುಂಡಾಟಿಕೆ ಮೆರೆದಿದ್ದು, ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ನಾಡದ್ರೋಹಿ ಘೋಷಣೆ ಕೂಗುತ್ತಾ ಬೆಳಗಾವಿ ಗಡಿ ಪ್ರವೇಶಕ್ಕೆ ಯತ್ನಿಸಿದರು.

shiv-sena-tried-reach-belgaum-border-prevention-police
ಕೃಪೆ-internet

ಜತೆಗೆ ಭಗವ ಧ್ವಜ ನೇಡಲು ಮುಂದಾದ ಶೀವಸೇನೆ ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರನ್ನೆ ತಳ್ಳಿ ಗಡಿ ಪ್ರವೇಶಕ್ಕೆ ಮುಂದಾಗಿದ್ದಾರೆ. ಈ ವೇಳೆ ಗಡಿ ಪ್ರವೇಶಿಸಿದರೇ ಲಾಠಿಚಾರ್ಜ್ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Key words: Shiv Sena- tried – reach – Belgaum border -Prevention -police.