ಮೈಸೂರು,ಜನವರಿ,22,2021(www.justkannada.in): ರೈಲ್ವೆ ಕಂಬಿಗೆ ಸಿಲುಕಿ ನರಳುತ್ತಿದ್ದ ಆನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಮೈಸೂರಿನ ಸರಗೂರು ತಾಲ್ಲೂಕಿನ ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಿನಿಂದ ಹೊರ ಬಂದು ಮರಳಿ ಕಾಡಿನತ್ತ ತೆರಳುವ ಸಂದರ್ಭದಲ್ಲಿ ರೈಲ್ವೆ ಕಂಬಿಗಳ ಅಡಿಯಲ್ಲಿ ಕಾಡಾನೆ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು. ಈ ವೇಳೆ ಆನೆ ಸಿಲುಕಿದ ವಿಷಯ ತಿಳಿದ ಎನ್.ಬೇಗೂರು ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಚರಣೆ ಮಾಡಿ ರೈಲ್ವೆ ಕಂಬಿಯನ್ನು ಕಿತ್ತುಹಾಕಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಅರಣ್ಯ ಇಲಾಖೆಯ ಸಮಯ ಪ್ರಜ್ಞೆಗೆ ಪರಿಸರ ಪ್ರೇಮಿಗಳು, ಹಾಗೂ ವನ್ಯಜೀವಿ ಪ್ರಿಯರು ಶ್ಲಾಘಿಸಿದ್ದಾರೆ.
ENGLISH SUMMARY….
Forest Dept. officials rescue elephant which was stuck in railway track
Mysuru, Jan. 22, 2021 (www.justkannada.in): Forest Department staff have rescued an elephant, which got stuck in a railway track, in N. Begur forest limits in Saragur Taluk of Mysuru District.
The elephant, which whisked out of the N.Begur forest area, got its leg stuck in the railway track while returning to its habitat. Learning about the incident, N. Begur forest staff arrived at the spot and rescued the elephant by cutting open the railway track.
Environmentalists and wildlife lovers have appreciated the timely action of the staff.
Keywords: Elephant/ railway track/ N. Begur forest limits/ Saragur/ Forest staff rescue elephant
Key words: Protection – elephant –caught-n railway railing-mysore