ಬೆಂಗಳೂರು, ಜೂನ್ 27,2019(www.justkannada.in): ಲೋಕಸಭೆ ಚುನಾವಣೆಯಲ್ಲಿ ನಿಖಲ್ ಕುಮಾರಸ್ವಾಮಿ ಸೋತು ಪ್ರಜ್ವಲ್ಲ ರೇವಣ್ಣ ಗೆದ್ದಿದ್ದಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕೆರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬಸ್ ತಡೆದ ವೈಟಿಪಿಎಸ್ ಸಿಬ್ಬಂದಿ ವಿರುದ್ದ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ಮಗ ಸೋತಿದ್ದಕ್ಕೆ ಅದರ ಸಿಟ್ಟನ್ನ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ವೋಟ್ ಹಾಕದಿದ್ದರೂ ಸಮಸ್ಯೆ ಹೇಳಿಕೊಂಡು ಬಂದ ಜನರಿಗೆ ಸ್ಪಂದಿಸುವುದು ಸಿಎಂ ಕರ್ತವ್ಯ. ಆದರೇ ಕಷ್ಟ ಹೇಳಿಕೊಂಡು ಬಂದ ಜನರ ಮೇಲೆಯೇ ಗರಂ ಆಗಿದ್ದು ಸರಿಯಲ್ಲ ಎಂದು ಟೀಕಿಸಿದರು.
ನೀವೇನು ಬೀದಿಲಿ ಹೋಗೊ ದಾಸಯ್ಯ ಅಲ್ಲ. ನೀವು ಸಿಎಂ ಅಲ್ಲದೆ ಇದ್ದಿದ್ದರೇ ನಾಯಿ ಕೂಡ ನಿಮ್ಮನ್ನ ಮೂಸುತ್ತಿರಲಿಲ್ಲ. ಜನ ವೋಟ್ ಹಾಕದಿದ್ದರೂ ನೀವು ಸಿಎಂ ಆಗಿ ಜನರ ಸಮಸ್ಯೆ ಆಲಿಸಬೇಕು. ಆದರೆ ಕಷ್ಟ ಹೇಳಿಕೊಳ್ಳಲು ಬಂದವರಿಗೆ ಲಾಠಿ ಚಾರ್ಜ್ ಮಾಡಿಸ್ತೀರಾ? ನೀವು ಸಿಎಂ ಆಗಲು ಆಯೋಗ್ಯರು ಎಂದು ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಪೌರುಷ ಪ್ರದರ್ಶನ ನಡೆಯುವುದಿಲ್ಲ. ‘ಮೊದಲು ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ. ಆಗ ಯಾರೂ ನಿಮ್ಮ ಬಳಿ ಸಹಾಯ ಕೇಳಿ ಬರುವುದಿಲ್ಲ ಎಂದು ಹರಿಹಾಯ್ದರು.
Key words: Prajwal -won – CMH D Kumaraswamy –not- tolerated-KS Eshwarappa