ಮೈಸೂರು,ಜನವರಿ,23,2021(www.justkannada.in): ಮೈಸೂರಿನ ಜೆಪಿ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ಕಮಹಾದೇವಿ ಪ್ರತಿಮೆಯನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನಾವರಣಗೊಳಿಸಿದರು.
ಜೆಪಿ ನಗರದಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪಗೆ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಜೆಪಿ ನಗರದ ವರ್ತುಲ ರಸ್ತೆಯಲ್ಲಿ ಶರಣ ಸಮಿತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಅಕ್ಕಮಹಾದೇವಿ ಪ್ರತಿಮೆ ನಿರ್ಮಾಣವಾಗಿದ್ದು, ಸುತ್ತೂರು ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಮೆ ಅನಾವರಣಗೊಳಿಸಿದರು. 11 ಅಡಿ ಎತ್ತರದ ಮೊದಲ ಅಕ್ಕಮಹಾದೇವಿ ಕಂಚಿನ ಪ್ರತಿಮೆ ಇದಾಗಿದೆ.
ಇನ್ನು ಸಿಎಂ ಬಿಎಸ್ ಯಡಿಯೂರಪ್ಪಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್. ಶಾಸಕರುಗಳಾದ ಜಿಟಿ ದೇವೇಗೌಡ, ಎಲ್ ನಾಗೇಂದ್ರ, ತನ್ವಿರ್ ಸೇಠ್, ರಾಮದಾಸ್ ಇತರರು ಸಾಥ್ ನೀಡಿದರು.
Key words: CM BS yeddyurappa- Akkamahadevi statue – Mysore