ನವದೆಹಲಿ,ಜನವರಿ,27,2021(www.justkannada.in): ನಿನ್ನೆ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಗೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಇದೀಗ ರೈತರ ಹೋರಾಟದಿಂದ ಹೊರಬರುವುದಾಗಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಘೋಷಿಸಿದೆ.
ಈ ಕುರಿತು ರೈಮುಖಂಡ ವಿ.ಎಂ ಸಿಂಗ್ ಘೋಷಣೆ ಮಾಡಿದ್ದಾರೆ. ಬೇರೇಯವರ ನಿರ್ದೇಶಕದ ಮೇರೆಗೆ ಪ್ರತಿಭಟನೆ ಮುಂದಕ್ಕೆ ಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಅವರಿಗೆ ಶುಭ ಹಾರೈಸುತ್ತೇವೆ. ಆದರೆ ಅಖಿಲ ಭಾರತ ಕಿಸಾನ್ ಸಂಘರ್ಘ ಸಮನ್ವಯ ಸಮಿತಿಯು ಈ ಪ್ರತಿಭಟನೆಯಿಂದ ಈಗಿನಿಂದಲೇ ಹಿಂದೆ ಸರಿಯುತ್ತಿದೆ ಎಂದರು.
ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಿನ್ನೆ ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿತ್ತು. ರ್ಯಾಲಿ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ತಳ್ಳಿ ರಾಜಧಾನಿಯೊಳಗೆ ನುಗ್ಗಿದ್ದರಿಂದ ಪೊಲೀಸರು ಜಲಫಿರಂಗಿ, ಲಾಠಿಚಾರ್ಜ್ ನಡೆಸಿ ರಣರಂಗವಾಗಿ ಮಾರ್ಪಟ್ಟಿತು.
Key words: Immediately –back- protest-Declaration -Farmer – VM Singh- All India Kisan Conflict Coordination Committee.