ಬೆಂಗಳೂರು,ಜನವರಿ,28,2021(www.justkannada.in): ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಹಿನ್ನೆಲೆಯಲ್ಲಿ ವಿಧಾನ ಸಭೆಯ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ನಡೆಯಬೇಕಾದ ಅಧಿವೇಶನ 1 1/2 ವಷ೯ದಿಂದ ನಡೆದಿರುವುದಿಲ್ಲ.ಉತ್ತರ ಕರ್ನಾಟಕ ಭಾಗವಾದ ಹುಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಇವುಗಳಲ್ಲಿ ಭಾರಿಪ್ರವಾಹ ಮತ್ತು ಬರಗಳಿಗೆ ಕರ್ನಾಟಕ ಸರ್ಕಾರ ಯಾವುದೇ ಅನುದಾನ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಹಾಗೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಬೆಳಗಾವಿ ನಮ್ಮದು ಎಂಬ ಹೇಳಿಕೆಗೆ ಕಾಂಗ್ರೆಸ್ ಶಾಸಕರು ಖಂಡಿಸಿದರು, ಮಹಜನ ವರದಿಯೇ ಅಂತಿಮ ಹಾಗೂ ನಂಜುಂಡಪ್ಪ ವರದಿ ಸಂಪೂರ್ಣ ಜಾರಿಗೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಪ್ರಕಾಶ ಕೆ.ರಾಠೋಡ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ , ಮೋಹನ ಕೊಂಡಜ್ಜಿ, ಹರೀಶ್ ಕುಮಾರ್, ಯು.ಬಿ.ವೆಂಕಟೇಶ್ ಉಪಸ್ಥಿತರಿದ್ದರು.
Key words: not -held – Belgaum-session-Protest -congress