ಚಾಮುಂಡಿಬೆಟ್ಟ : 42ದಿನದಲ್ಲಿ 1 ಕೋಟಿ, 33 ಲಕ್ಷ ರೂ. ಕಾಣಿಕೆ ಸಂಗ್ರಹ”

ಮೈಸೂರು,ಜನವರಿ,29,2021(www.justkannada.in) : ಲಾಕ್ ಡೌನ್ ಬಳಿಕ ಚಾಮುಂಡಿ ಕಾಣಿಕೆಯಲ್ಲಿ ಸುಧಾರಣೆಯಾಗಿದ್ದು, ಚಾಮುಂಡೇಶ್ವರಿ ದೇವಸ್ಥಾನದಲ್ಲಿ  1,33,25,302 ರೂ. ಕಾಣಿಕೆ ಸಂಗ್ರಹವಾಗಿದೆ.jk

ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ 60ಕ್ಕೂ ಹೆಚ್ಚು ಮಂದಿಯಿಂದ ಹುಂಡಿ ಎಣಿಕೆ ಮಾಡಲಾಯಿತು.

ಕೊರೊನಾ ಕಡಿಮೆಯಾಗುತ್ತಿದ್ದಂತೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಆಗಮನ ಹೆಚ್ಚಾಗಿದೆ. ಡಿಸೆಂಬರ್.17ರಿಂದ ಜ.27ರವರೆಗೆ 42 ದಿನದಲ್ಲಿ 1,33,25,302 ರೂ ಕಾಣಿಕೆ ಸಂಗ್ರಹವಾಗಿದೆ. ಚಿನ್ನ 253 ಗ್ರಾಂ, ಬೆಳ್ಳಿ 810 ಗ್ರಾಂ ಸಂಗ್ರಹವಾಗಿದೆ.

ಭಕ್ತರ ಸಂಖ್ಯೆ ಹೆಚ್ಚಿದಂತೆ, ಕಾಣಿಕೆಯ ಮೊತ್ತ ಹೆಚ್ಚಾಗಿದೆ. ಅನ್ಲಾಕ್ ನಿಯಮ ಜಾರಿ ಬಳಿಕ ಪ್ರವಾಸಿ ಸ್ಥಳ, ಧಾರ್ಮಿಕ ಕ್ಷೇತ್ರಗಳತ್ತ ಜನ ಸಂಖ್ಯೆ ಹೆಚ್ಚಿದೆ. ಮೈಸೂರಿನ ಪ್ರಮುಖ ಪ್ರವಾಸಿತಾಣ, ಧಾರ್ಮಿಕ ಕೇಂದ್ರವಾಗಿರುವ ಚಾಮುಂಡಿಬೆಟ್ಟ, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಚಾಮುಂಡಿ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ENGLISH SUMMARY…

Chamundeshwari temple gets Rs.1.33 crore hundi collection in 42 days
Mysuru, Jan. 29, 2021 (www.justkannada.in): The hundi collection of Chamundeshwari temple, atop Chamundi hill, has improved post lockdown. The temple has received Rs.1,33,25,302 hundi collection.Chamundi Hill-42 day-1 crore--33 lakh-gift-collection 
The number of devotees to the temple has increased post covid lockdown period as a result, the hundi collection of the temple between December 17, 2020, and January 27, 2021 is above Rs.1.33 crore. Apart from cash 253 gms of gold and 810 gms of silver donations have also been collected in the hundi.
Keywords: Chamundeshari temple/ Chamundi hill, Mysuru/ Rs.1.33 crore hundi collection

key words : Chamundi Hill-42 day-1 crore–33 lakh-gift-collection