ಮೈಸೂರು,ಜನವರಿ,29,2021(www.justkannada.in): ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಜನವರಿ 27 ರಿಂದ ಜನವರಿ 29 ರವರೆಗೆ ನಡೆಸಲಾಯಿತು.
ಮೂರು ದಿನಗಳ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಸುಮಾರು 700 ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು. ಸಂಸ್ಥೆಯ ಹಿರಿಯ ಉದ್ಯೋಗಿ ಮತ್ತು ಅಸಿಸ್ಟೆಂಟ್ ರಿಜಿಸ್ಟ್ರಾರ್ ಎನ್ ಪರಿಮಳ ಅವರು ಮೊದಲು ಲಸಿಕೆ ಪಡೆದರು. ನಂತರ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಅವರಿಗೆ ಕೋವಿಡ್ ಲಸಿಕೆ ನೀಡಲಾಯಿತು.
ಎನ್ ಪರಿಮಳ ಅವರು ಕ್ಯಾನ್ಸರ್ ಗೆ ತುತ್ತಾಗಿ ಬದುಕುಳಿದವರು, ಆದರೂ ಸಹ ಅವರು ಕೋವಿಡ್ ಲಸಿಕೆ ಪಡೆದು ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ.
ಡಾ.ಸುಂದರಾ ರಾಜು, ಡಾ.ಜಿ.ರಾಜೇಶ್ವರಿ, ಡಾ.ಪ್ರಕಾಶ್ ಅವರನ್ನೊಳಗೊಂಡ ತಜ್ಞರ ತಂಡವು ನರ್ಸ್ / ಸಿಬ್ಬಂದಿ ಸದಸ್ಯರ ನೆರವಿನಿಂದ ಸುಗಮ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತು.
ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ವ್ಯಾಕ್ಸಿನೇಷನ್, ವೀಕ್ಷಣೆ ಇತ್ಯಾದಿಗಳಿಗಾಗಿ ಸಂಸ್ಥೆ ಮೂರು ಕೊಠಡಿಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಿತ್ತು. ಅಡ್ಡಪರಿಣಾಮಗಳ ಬಗ್ಗೆಯೂ ಕಾಳಜಿ ವಹಿಸಲಾಗಿತ್ತು.
Key words: Covidshied -vaccination -programme –mysore-AIISH