ಬೆಂಗಳೂರು, ಜನವರಿ 30, 2020 (www.justkannada.in): ಥಿಯೇಟರ್’ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಮಾಸ್ಟರ್ ಚಿತ್ರ ಒಟಿಟಿಯಲ್ಲೂ ಬಿಡುಗಡೆಯಾಗಿದೆ.
ಇದರಿಂದ ಬೇಸರಗೊಂಡಿರುವ ಪ್ರದರ್ಶಕರು ನಿರ್ಮಾಪಕರ ಬಳಿ ಈ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅಂದಹಾಗೆ ಈ ಚಿತ್ರ ವಿಶ್ವದಾದ್ಯಂತ ಸುಮಾರು 225 ಕೋಟಿಗಳನ್ನು ಸಂಗ್ರಹಿಸಿದೆ.
ಪ್ರದರ್ಶಕರ ಸಂಗ್ರಹದಲ್ಲಿ ನಷ್ಟವಾಗುವ ಕಾರಣದಿಂದ ಅದನ್ನು ಸರಿದೂಗಿಸಲು ಒಟಿಟಿ ಲಾಭದ ಶೇ.10ರಷ್ಟು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ.
ಆದರೆ ಚಿತ್ರದ 17ನೇ ದಿನದಿಂದ ಲಾಭದ ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಪ್ರದರ್ಶಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.