ಬೆಂಗಳೂರು, ಜನವರಿ 30, 2020 (www.justkannada.in): ಕನ್ನಡಿಗರ ಭಾಷಾಭಿಮಾನದ ಬಗ್ಗೆ ನಟ ದರ್ಶನ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳರು ಸಿಕ್ಕರೆ ನಾವು ತಮಿಳಿನಲ್ಲೇ ಮಾತನಾಡುತ್ತೇವೆ. ಹಾಗೆ ತೆಲಗು ಮಂದಿ ಸಿಕ್ಕರೇ ಅವರ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತೇವೆ. ಹಿಂದಿ… ಇಂಗ್ಲಿಷ್ ಜನರೊಂದಿಗೂ ನಮ್ಮ ವ್ಯವಹಾರ ಅವರ ಭಾಷೆಯಲ್ಲಿಯೇ ಇರುತ್ತದೆ ಎಂದು ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಕನ್ನಡದಲ್ಲಿ ಮಾತನಾಡಬೇಕು. ಮೊದಲು ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನ ಇರಬೇಕು. ನಾವೆಲ್ಲರೂ ಬದಲಾದರೆ ತಾನಾಗಿಯೇ ಕನ್ನಡ ಬೆಳೆಯಲಿದೆ ಎಂದು ದರ್ಶನ್ ಹೇಳಿದ್ದಾರೆ.
ಇನ್ನು ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆಲಗು ಆವೃತ್ತಿ ಬಿಡುಗಡೆಗೆ ಅಲ್ಲಿನ ಚಿತ್ರಮಂದಿರಗಳ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆಯೂ ದಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ.