ಮೈಸೂರು,ಜನವರಿ,31,2021(www.justkannada.in) : ಭಾರತದಲ್ಲಿ ಕೊರೋನ ಕಂಟ್ರೋಲ್ ನಲ್ಲಿದೆ ಅಂದರೆ, ಇದಕ್ಕೆ ನಮ್ಮ ಪರಂಪರೆ, ಆಹಾರ ಪದ್ದತಿ ಕಾರಣ. ತಟ್ಟೆ ಬಾರಿಸುವುದರಿಂದ, ದೀಪ ಹಚ್ಚುವುದರಿಂದ ಕೊರೊನಾ ಓಡಿ ಹೋಗಿಲ್ಲ ಕೊರೊನಾ ಓಡಿ ಹೋಗಿಲ್ಲ. ಅದಕ್ಕೆ ಅದರದೆ ಆದ ಕರ್ತವ್ಯಗಳಿವೆ ಅದನ್ನ ಮಾಡಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ ಎಂದು ಸಾಹಿತಿ ಅರವಿಂದ ಮಾಲಗತ್ತಿ ಹೇಳಿದರು.
ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದರು.
ಕೊರೊನಾ ಸಂಧರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಹೃದಯ ಪೂರ್ವಕವಾಗಿ ತಮ್ಮ ತನುಮನ ಧಾರೆ ಎರೆದಿದ್ದಾವೆ. ಆದರೆ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಇದನ್ನೆ ಬಂಡವಾಳ ಮಾಡಿಕೊಂಡವು. ಜನರ ತಲ್ಲಣವನ್ನ ಹೋಗಲಾಡಿಸಬೇಕಾದವರು ಇದನ್ನೆ ಬಂಡವಾಳ ಮಾಡಿಕೊಂಡರು ಎಂದು ಕಿಡಿಕಾರಿದರು.
ರೈತರ ಹೋರಾಟದಲ್ಲಿ ದುಷ್ಟ ಶಕ್ತಿ ಒಳ ಸೇರಿ ನೆಲದ ಪಾವಿತ್ರ್ಯತೆ ಹಾಳು
ಇಂತಹ ತಲ್ಲಣಗಳನ್ನ ಎಷ್ಟು ಹೇಳಿದರೂ ಸಾಲದು. ಗಣರಾಜೋತ್ಸವದ ರೈತರ ಹೋರಾಟದಲ್ಲಿ ದುಷ್ಟ ಶಕ್ತಿಗಳು ಒಳ ಸೇರಿ ನೆಲದ ಪಾವಿತ್ರ್ಯತೆ ಹಾಳು ಮಾಡಿದವು. ಈಗ ಆ ದುಷ್ಟ ಶಕ್ತಿಗಳನ್ನ ಹುಡುಕುವ ಆಗತ್ಯವಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
key words : tray-Lamp-Hatchcod-Corona-has not fled-writer-Aravind Malagatti