ಬೆಂಗಳೂರು,ಫೆಬ್ರವರಿ,1,2021(www.justkannada.in): ಚಿತ್ರಮಂದಿರಗಳಲ್ಲಿ ಶೇ,100 ರಷ್ಟು ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ, ಇಂದಿನಿಂದ ಚಿತ್ರಮಂದಿರಗಳು ಸಂಪೂರ್ಣ ಮುಕ್ತವಾಗಲಿವೆ.
ಕೊರೋನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಚಿತ್ರಮಂದಿರಗಳಲ್ಲಿ 11 ತಿಂಗಳ ನಂತರ ಹೌಸ್ ಫುಲ್ ಗೆ ಅವಕಾಶ ನೀಡಲಾಗಿದೆ. ಕೋವಿಡ್-19 ಸೋಂಕಿನಿಂದ ಚಿತ್ರಮಂದಿರಗಳನ್ನ ಮುಚ್ಚಲಾಗಿತ್ತು. ಬಳಿಕ ಶೇ 50ರಷ್ಟು ಪ್ರೇಕ್ಷಕರನ್ನೊಳಗೊಂಡಂತೆ ಚಿತ್ರಮಂದಿರ ತೆರೆಯಲು ಸರ್ಕಾರ ಅವಕಾಶ ನೀಡಿತ್ತು.
ಇದೀಗ ಸಂಪೂರ್ಣ ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದುಮ, ಚಿತ್ರೋದ್ಯಮ, ಚಿತ್ರಮಂದಿರಗಳ ಮಾಲೀಕರು ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ, ಚಿತ್ರಮಂದಿರಗಳ ಒಳಗೆ ಮತ್ತು ಹೊರಗೆ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಹವಾನಿಯಂತ್ರಣ ವ್ಯವಸ್ಥೆಯನ್ನು 24-30 ಡಿ.ಸೆ.ಇಡುವುದು ಅಗತ್ಯ.
ಚಿತ್ರಮಂದಿರ ಆವರಣದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು. ಟಿಕೆಟ್ ಗಳನ್ನು ಆನ್ಲೈನ್ ಮೂಲಕ ಕಾಯ್ದಿರಿಸಲು ಆದ್ಯತೆ ನೀಡಬೇಕು. ಜನ ಸಂದಣಿ ಹೆಚ್ಚದಂತೆ ಹೆಚ್ಚುವರಿ ಟಿಕೆಟ್ ಕೌಂಟರ್ ತೆರೆಯಲು ಸೂಚನೆ ನೀಡಲಾಗಿದೆ.
ENGLISH SUMMARY…
Cinemas to have full audience from today
Bengaluru, Feb. 01, 2021 (www.justkannada.in): The Government of India has accorded permission for cinemas to fill 100% seats from today.
Cinemas were closed following the Corona pandemic. Permission has been given for houseful after nearly 11 months. A few days ago permission was given to run the cinemas with only 50% of its seating capacity.
The announcement has made owners of the cinema halls and other film fraternity happy. However, following COVID-19 pandemic safety guidelines remains mandatory. Also, instructions have been given to keep the air conditioners at 24-300 C.
Apart from that social distancing, wearing of masks, sanitizing the entire theatre after each show is mandatory. Preference should be given for online ticket booking and additional counters shall be opened to issue tickets in case of rush, according to the guidelines.
Keywords: Cinemas to be housefull from today/ Govt. of India/ Corona
Key words: Theaters – completely -open -today.